Home ನಮ್ಮ ಜಿಲ್ಲೆ ಉತ್ತರ ಕನ್ನಡ ಗೋಕರ್ಣದಲ್ಲಿ ಕಾಡಿನ ಗುಹೆಯೊಳಗಿದ್ದ ರಷ್ಯಾನ್ ಮಹಿಳೆ, ಮಕ್ಕಳು!

ಗೋಕರ್ಣದಲ್ಲಿ ಕಾಡಿನ ಗುಹೆಯೊಳಗಿದ್ದ ರಷ್ಯಾನ್ ಮಹಿಳೆ, ಮಕ್ಕಳು!

0

ದಾಂಡೇಲಿ: ಗೋಕರ್ಣದ ರಾಮತೀರ್ಥ ಗುಡ್ಡದ ಮೇಲಿನ ಕಾಡಿನ ಪ್ರದೇಶ ಗುಹೆಗಳಿಂದ ಕೂಡಿದ್ದು, ಇದು ಸ್ಲೈಡಿಂಗ್ ಆಗುವ ಅಪಾಯಕಾರಿ ಸ್ಥಳವಾಗಿದೆ ಹಾವು ಮುಂತಾದ ಅಪಾಯಕಾರಿ ವಿಷ ಜಂತುಗಳನ್ನು ಹೊಂದಿರುವಂತಹ ಈ ಅಪಾಯಕಾರಿ ಸ್ಥಳದಲ್ಲಿ ವಿದೇಶಿ ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳ ಜೊತೆ ವಾಸವಿದ್ದ ಘಟನೆ ನಡೆದಿದೆ. ಗಸ್ತು ತಿರುಗುತ್ತಿದ್ದ ಪೊಲೀಸರು ಮಹಿಳೆ ಹಾಗೂ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.

ಕಾಡಿನಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಗುಡ್ಡದ ತುದಿಯಲ್ಲಿ ಯಾರೋ ಅಪರಿಚಿತರು ಉಳಿದುಕೊಂಡಂತೆ ಕಂಡುಬಂದಿದ್ದರಿಂದ, ಗುಡ್ಡದ ತುದಿ ತಲುಪಿದಾಗ ಅಲ್ಲಿ ಗುಹೆಯ ಸ್ವರೂಪದ ಕುಟೀರದಲ್ಲಿ ರಷ್ಯಾ ಮೂಲದ ವಿದೇಶಿ ಮಹಿಳೆ, ನಿನಾ ಕುಟಿನಾ ( 40 ವರ್ಷ) ತನ್ನ ಇಬ್ಬರು ಮಕ್ಕಳ ಜೊತೆ ವಾಸವಿದ್ದದ್ದು ಕಂಡು ಬಂದಿದೆ, ನೀನಾಳೊಂದಿಗೆ ಎರಡು ಮಕ್ಕಳು ಕುಮಾರಿ ಪ್ರೆಮಾ(6) ಹಾಗೂ ಕುಮಾರಿ ಅಮಾ (4) ಜೊತೆಗೆ ಇದ್ದರು, ವಿದೇಶಿ ಮಹಿಳೆಯನ್ನು ವಿಚಾರಿಸಿದಾಗ ದೇವರ ಪೂಜೆ, ಧ್ಯಾನ ಮಾಡಲು ಆಸಕ್ತಿಯಿತ್ತು. ಆ ಕಾರಣ ಗೋವಾದಿಂದ ಮಕ್ಕಳೊಂದಿಗೆ ಗೋಕರ್ಣಕ್ಕೆ ಬಂದು ಗುಡ್ಡದ ಮೇಲಿರುವ ಗುಹೆಯಲ್ಲಿ ಉಳಿದುಕೊಂಡೆ. ದೇವರ ಪೂಜೆ ಹಾಗೂ ಧ್ಯಾನ ಮಾಡಿಕೊಂಡಿದ್ದೆ ಎಂದು ಹೇಳಿದ್ದಾಳೆ.

ಅಪಾಯಕಾರಿ ಸ್ಥಳದಿಂದ ರಕ್ಷಣೆ ನೀನಾ ವಾಸವಿದ್ದ ರಾಮತೀರ್ಥ ಗುಡ್ಡವು ಭೂಕುಸಿತದ ಅಪಾಯವಿರುವ, ಹಾವುಗಳು ಸೇರಿದಂತೆ ವಿಷಕಾರಿ ಜಂತುಗಳಿರುವ ಅಪಾಯಕಾರಿ ಸ್ಥಳವಾಗಿದೆ. ಗುಹೆ ಇರುವ ರಾಮತೀರ್ಥ ಗುಡ್ಡವು ಸ್ಲೈಡಿಂಗ್ ಆಗುವ ಅಪಾಯಕಾರಿ ಸ್ಥಳ. ಹಾವು ಮುಂತಾದ ಅಪಾಯಕಾರಿ ವಿಷ ಜಂತುಗಳನ್ನು ಹೊಂದಿರುವ ಅಪಾಯಕಾರಿ ಸ್ಥಳ. ‌ಈ ಕಾರಣದಿಂದ, ಅಲ್ಲಿನ ವಾಸದ ಅಪಾಯಗಳ ಬಗ್ಗೆ ವಿದೇಶಿ ಮಹಿಳೆಗೆ ತಿಳಿಸಿ, ಮಕ್ಕಳೊಂದಿಗೆ ಕೂಡಲೇ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಪೊಲೀಸರು ಮನವರಿಕೆ ಮಾಡಿದ್ದಾರೆ. ನಂತರ ನೀನಾ ಕುಟಿನಾ ಹಾಗೂ ಆಕೆಯ ಚಿಕ್ಕ ಮಕ್ಕಳನ್ನು ಗುಡ್ಡದ ಗುಹೆಯಿಂದ ಸುರಕ್ಷಿತವಾಗಿ ಕೆಳಗೆ ಕರೆದುಕೊಂಡು ಬಂದಿದ್ದಾರೆ.

ನಿನಾ ಕುಟಿನಾಳನ್ನು ಕುಮಟಾ ತಾಲೂಕಿನ ಬಂಕಿಕೋಡ್ಲು ಗ್ರಾಮದಲ್ಲಿರುವ ಎನ್. ಜಿ .ಒ . ಶಂಕರ ಪ್ರಸಾದ ಪೌಂಢೇಶನ್‌ಗೆ ಸಂಬಂದಿಸಿದ ಸರಸ್ವತಿ ಸ್ವಾಮೀಜಿ ಆಶ್ರಮಕ್ಕೆ ಮಹಿಳಾ ಪೊಲೀಸ್ ಸಿಬ್ಬಂದಿಯವರ ರಕ್ಷಣೆಯಲ್ಲಿ ಬಿಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಾಸಪೋರ್ಟ್ ಮಾಹಿತಿ ನೀಡದ ಮಹಿಳೆ
ರಷ್ಯಾದ ನೀನಾ ಆಧ್ಯಾತ್ಮಿಕತೆ ಬಗ್ಗೆ ಹೆಚ್ಚು ಒಲವಿರುವ ಮಹಿಳೆಯಾಗಿದ್ದು, ಭಾರತದಲ್ಲಿಯೇ ಉಳಿಯುವ ಉಧ್ದೇಶದಿಂದ ತನ್ನ ಹಾಗೂ ತನ್ನ ಮಕ್ಕಳ ಪಾಸಪೋರ್ಟ್, ವೀಸಾ ಮಾಹಿತಿಯನ್ನು ನೀಡಲು ನಿರಾಕರಿಸಿದಳು. ಕಾರಣ ಆಕೆಗೆ ಆಪ್ತ ಸಮಾಲೋಚನೆಗೆ ಒಳ ಪಡಿಸಿ ಅಗತ್ಯ ಮಾಹಿತಿ ಪಡೆಯಲು ಮಹಿಳಾ ಪೊಲೀಸ್ ಅಧಿಕಾರಿ ಸಿಬ್ಬಂದಿ ಪ್ರಯತ್ನಿಸಿದ್ದಾರೆ, ಯೋಗರತ್ನ ಸರಸ್ವತಿ ಸ್ವಾಮೀಜಿ (ಮಹಿಳಾ ಸ್ವಾಮೀಜಿ) ಮೂಲಕ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮೂಲಕ ಪ್ರಯತ್ನಿಸಲಾಯಿತು. ನೀನಾ ವಿದೇಶಿ ಮಹಿಳೆಯು ತಾವು ಉಳಿದುಕೊಂಡಿದ್ದ ಕಾಡಿನೊಳಗಿರುವ ಗುಹೆಯಲ್ಲಿ ಅಥವಾ ಸಮೀಪದ ಕಾಡಿನಲ್ಲಿ ತಮ್ಮ ಪಾಸಪೋರ್ಟ್, ವೀಸಾ ಎಲ್ಲಿಯೋ ಬಿದ್ದಿರಬಹುದು ಎಂದು ಅಧಿಕಾರಿಗಳ ಪ್ರಶ್ನೆಗೆ ಹಾರಿಕೆಯ ಉತ್ತರ ನೀಡಿದ್ದಾಳೆ.

ನಂತರ ರಷ್ಯಾದ ನೀನಾ ಹಾಗೂ ಆಕೆಯ ಇಬ್ಬರು ಚಿಕ್ಕ ಹೆಣ್ಣು ಮಕ್ಕಳನ್ನು ಅವರ ಸುರಕ್ಷತೆ ದೃಷ್ಟಿಯಿಂದ ಮಹಿಳಾ ಮತ್ತು ಮಕ್ಕಳ ಕಾಲ್ಯಾಣ ಇಲಾಖೆಯ ಮಹಿಳಾ ಸ್ವೀಕಾರ ಕೇಂದ್ರದಲ್ಲಿ ಸುರಕ್ಷಿತವಾಗಿ ಇಡಲಾಗಿದೆ.

Exit mobile version