Home ಸುದ್ದಿ ದೇಶ ಜಪಾನ್ ಹಿಂದಿಕ್ಕಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಭಾರತ

ಜಪಾನ್ ಹಿಂದಿಕ್ಕಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಭಾರತ

0

ನವದೆಹಲಿ: ಸೌರಶಕ್ತಿ ಉತ್ಪಾದನೆಯಲ್ಲಿ ಭಾರತ ಜಪಾನ್‌ ಅನ್ನು ಹಿಂದಿಕ್ಕಿ ಇದೀಗ 1 ಲಕ್ಷದ 8 ಸಾವಿರದ 494 ಗಿಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುತ್ತಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. ಜಪಾನ್‌ ಸದ್ಯಕ್ಕೆ 96,459 GWh ವಿದ್ಯುತ್‌ ಉತ್ಪಾದಿಸುತ್ತಿದ್ದರೆ ಭಾರತ 1,08,494 GWh ವಿದ್ಯುತ್‌ ಉತ್ಪಾದಿಸಿ ಮುಂಚೂಣಿಯಲ್ಲಿದೆ ಎಂದಿದ್ದಾರೆ.

ಇತ್ತಿಚೆಗೆ ದೆಹಲಿಯಲ್ಲಿ ಮಾತನಾಡಿರುವ ಕೇಂದ್ರ ಸಚಿವರು ಭಾರತ ಸೌರಶಕ್ತಿ ಉತ್ಪಾದನೆಯಲ್ಲಿ ಭಾರತವೀಗ ಜಪಾನ್‌ ಅನ್ನು ಹಿಂದಿಕ್ಕುವ ಮೂಲಕ ಉತ್ಪಾದನೆಯಲ್ಲಿ ಜಪಾನ್‌ಗಿಂತ ಮುಂಚೂಣಿಯಲ್ಲಿದೆ. ಮೂರನೇ ಅತಿದೊಡ್ಡ ದೇಶವಾಗಿ ಹೊರಹೊಮ್ಮಿದೆ. ಚೈನಾ ಮತ್ತು ಅಮೆರಿಕ ನಂತರದ ಸ್ಥಾನದಲ್ಲಿ ಭಾರತವಿದೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲ, ಪ್ರೋತ್ಸಾಹ, ಮಾರ್ಗದರ್ಶನ ಅತ್ಯಮೂಲ್ಯವಾಗಿದೆ. ಅವರ ದೂರದೃಷ್ಟಿಯಿಂದಾಗಿ ಭಾರತ ಶುದ್ಧ ಇಂಧನ ಕ್ರಾಂತಿಯಲ್ಲಿ ಜಾಗತಿಕವಾಗಿ ಮುಂಚೂಣಿ ಸಾಧಿಸಿದೆ, ಅಂತರಾಷ್ಟ್ರೀಯ ಇಂಧನ ಸಂಸ್ಥೆ 2024ರ ದತ್ತಾಂಶದ ಪ್ರಕಾರ ಚೀನಾ ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. 2023ರಲ್ಲಿ 260 GW ಸೇರಿಸಿದ್ದು, ಕಳೆದ ವರ್ಷಕ್ಕಿಂತ ಮೂರು ಪಟ್ಟು ಸನಿಹದಲ್ಲಿದೆ.

ಭಾರತ 2023ರಲ್ಲಿ 12 ಗಿಗಾವ್ಯಾಟ್ ಸೌರ ಪಿವಿ (ಫೋಟೋವೋಲ್ಟಾಯಿಕ್) ಅನ್ನು ಸ್ಥಾಪಿಸಿತು. 2024ರಲ್ಲಿ ಇದು ಗಮನಾರ್ಹವಾಗಿ ಹೆಚ್ಚಾಗುವ ನಿರೀಕ್ಷೆಯಿದೆ. ಬ್ರೆಜಿಲ್ 2023ರಲ್ಲಿ 15 ಗಿಗಾವ್ಯಾಟ್ ಸೌರ ಪಿವಿ ಸಾಮರ್ಥ್ಯ ಸಾಧಿಸಿದ್ದು, ಇದು ಹಿಂದಿನ ವರ್ಷಕ್ಕಿಂತ 30% ಹೆಚ್ಚಾಗಿದೆ ಎಂದು ವಿವರಿಸಿದ್ದಾರೆ.

ನವೀಕರಿಸಬಹುದಾದ ಇಂಧನಕ್ಕಾಗಿ ಚೀನಾ 14ನೇ ಪಂಚವಾರ್ಷಿಕ ಯೋಜನೆಗೆ ಮಹತ್ವಾಕಾಂಕ್ಷೆಯ ಗುರಿ ನಿಗದಿಪಡಿಸಿದ್ದು, ಮತ್ತಷ್ಟು ಬೆಳವಣಿಗೆಗೆ ಕಾರಣವಾಗುವ ನಿರೀಕ್ಷೆಯಿದೆ ಎಂದಿರುವ ಸಚಿವರು. ಅಮೆರಿಕಾ 2022ರಲ್ಲಿ ಹಣದುಬ್ಬರ ಕಡಿತ ಕಾಯ್ದೆಯಲ್ಲಿ (IRA) ಸೌರ ಪಿವಿಗಾಗಿ ಉದಾರವಾಗಿ ಅನುದಾನ ಒದಗಿಸಿತು. ಇದರ ಪರಿಣಾಮ 2023ರಲ್ಲಿ ಅಮೆರಿಕದಲ್ಲಿ ಶೇ.70ರಷ್ಟು ಹೆಚ್ಚಾಗಿ ದಾಖಲೆಯ 32 GW ತಲುಪಿದೆ ಎಂದಿದ್ದಾರೆ.

ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡುವ ಗುರಿ: ಭಾರತವು 1 ಶತಕೋಟಿ ಟನ್‌ಗಳಷ್ಟು ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡುವ ಗುರಿ ಹೊಂದಿದ್ದು, 2030ರ ವೇಳೆಗೆ ಶೇ.45ರಷ್ಟು ಮತ್ತು 2070ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆ ಗುರಿ ಸಾಧಿಸುವತ್ತ ಹೆಜ್ಜೆ ಹಾಕಿದೆ ಎಂದಿದ್ದಾರೆ.

5 ವರ್ಷ ಮೊದಲೇ ಸಾಧನೆ: 2030ರ ವೇಳೆಗೆ ಪಳೆಯುಳಿಕೆಯೇತರ ಆಧಾರಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಶೇಕಡ50ಕ್ಕೆ ಹೆಚ್ಚಿಸಲಿದೆ ಗ್ಲ್ಯಾಸ್ಗೋದಲ್ಲಿ ನಡೆದ COP26ನಲ್ಲಿ ಭಾರತ ತನ್ನ ಬದ್ಧತೆಗಳನ್ನು ಪೂರೈಸುವ ಹಾದಿಯಲ್ಲಿದೆ. 2030ರ ವೇಳೆಗೆ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು 500 GWಗೆ ಹೆಚ್ಚಿಸಲಿದೆ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳಿಂದ ಶೇ.50ರಷ್ಟು ಇಂಧನ ಅಗತ್ಯಗಳನ್ನು ಪೂರೈಸಲಿದೆ ಎಂದು ಘೋಷಿಸಿದ್ದಾರೆ. ಇನ್ನು ಪ್ಯಾರಿಸ್ ಒಪ್ಪಂದಕ್ಕೆ ಅನುಗುಣವಾಗಿ ಭಾರತ ತನ್ನ ವಿದ್ಯುತ್ ಸಾಮರ್ಥ್ಯದ ಶೇಕಡ50ರಷ್ಟು ಅನ್ನು ಪಳೆಯುಳಿಕೆಯೇತರ ಮೂಲಗಳಿಂದ 5 ವರ್ಷ ಮೊದಲೇ ಸಾಧಿಸಿದೆ ಎಂದರು.

NO COMMENTS

LEAVE A REPLY

Please enter your comment!
Please enter your name here

Exit mobile version