Home ನಮ್ಮ ಜಿಲ್ಲೆ ಕಲಬುರಗಿ ಪ್ರಚೋದನಕಾರಿ ಹೇಳಿಕೆ ನೀಡುವುದು ಬಿಜೆಪಿಗರ ಚಾಳಿ

ಪ್ರಚೋದನಕಾರಿ ಹೇಳಿಕೆ ನೀಡುವುದು ಬಿಜೆಪಿಗರ ಚಾಳಿ

0

ಕಲಬುರಗಿ : ಧರ್ಮಸ್ಥಳ, ಮದ್ದೂರು ಚಲೋ ಆಯ್ತು.  ಇಗಾ ಪ್ರಚೋದನಾಕಾರಿ ಹೇಳಿಕೆ ನೀಡುವುದು ಬಿಜೆಪಿ ನಾಯಕರ ಚಾಳಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಸಿಟಿ ರವಿ ಸೇರಿದಂತೆ ಯಾವ ಬಿಜೆಪಿ ನಾಯಕರು ತಮ್ಮ ಮಕ್ಕಳ ಕೈಗೆ ಮಚ್ಚು, ಲಾಂಗು ಕೊಟ್ಟಿದಾರ?, ತಮ್ಮ ಮಕ್ಕಳ ಹೆಗಲಿಗೆ ಕೇಸರಿ ಶಾಲು ಹಾಕಿ ಧರ್ಮ ರಕ್ಷಣೆಗೆ ಕಳಿಸಿದ್ದಾರ ? ಎಂದು ಪ್ರಶ್ನಿಸಿದರು.

ಭಾನುವಾರ ಭಾರತ ಪಾಕಿಸ್ತಾನ ಕ್ರಿಕೆಟ್ ನಡೆಯಿತಲ್ಲ ಬಿಜೆಪಿಗರಿಗೆ ನಾಚಿಕೆಯಾಗಬೇಕು. ಭಾರತ ಆಡದಿದ್ದರೆ ಅಂಕ ಹೋಗುತ್ತವೆ ಎನ್ನುವುದು ಬಿಜೆಪಿಗೆ ಸಮಜಾಯಿಷಿ ನೀಡುತ್ತಾರೆ. ಹೋದರೆ ಹೋಗಲಿ ಬಿಡಿ ಅಂಕ ಮುಖ್ಯನಾ? ಸರ್ಕಾರ ಬಿಸಿಸಿಐಗೆ ನಿರ್ದೇಶನ ಯಾಕೆ ನೀಡಿಲ್ಲ. ಪ್ರಧಾನಿ ಯಾಕೆ ಗೃಹ ಸಚಿವರಿಗೆ ಹೇಳಿಲ್ಲಾ ?  ಹುತಾತ್ಮರ ಮನೆಯವರು ಪಂದ್ಯ ಆಡುವುದು ಬೇಡ ಅಂದಿದ್ದಾರೆ, ಆದರೂ ಪಂದ್ಯ ಯಾಕೆ ನಡೆಸಿದರು ಎಂದು ಖಾರವಾಗಿ ಪ್ರಶ್ನಿಸಿದರು.

ಕೆಪಿಎಸ್‌ಸಿ ಪಿಡಿಓ ನೇಮಕಾತಿ ವಿಚಾರದಲ್ಲಿ ನೆಪ ಹೇಳುತ್ತಿದೆ. ಕೆಪಿಎಸ್‌ಸಿ ಹುದ್ದೆಗಳ ನೇಮಕಾತಿ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲೇಬೇಕು. ಮೊದಲು ಮೀಸಲಾತಿ ಗೊಂದಲವಿತ್ತು ಅದನ್ನು ಸರಿಪಡಿಸಲಾಗಿದೆ.

ಹಿಂದಿನ ಸರ್ಕಾರದಲ್ಲಿ ಕೆಲ ಪಂಚಾಯತ್‌ಗಳು ನಗರ ವ್ಯಾಪ್ತಿಗೆ ಸೇರಿ ಕ್ಷೇತ್ರ ಮರು ವಿಂಗಡನೆಗೆ ತಡವಾಯಿತು. ಬ್ಯಾಲೆಟ್ ಮೂಲಕ ಚುನಾವಣೆ ನಡೆಸಿದರೆ ತಡವಾಗುತ್ತದೆ ಎನ್ನುವ ವಿಚಾರಕ್ಕೆ ಸಂಬಧಿಸಿದಂತೆ ಪ್ರತಿಕ್ರಿಯೆ ನೀಡಿದ ಖರ್ಗೆ, ಆದರೆ ಆಗಲಿ ಬಿಡಿ ಅಮೇರಿಕಾ, ಫ್ರಾನ್ಸ್ಗಳಲ್ಲಿ ತಿಂಗಳುಗಟ್ಟಲೇ ಎಣಿಕೆ ನಡೆಯುತ್ತದಲ್ಲ? ಮತದಾರರ ಸ್ವಚ್ಛ ಪಟ್ಟಿ ನೀಡಲು ಚುನಾವಣೆ ಆಯೋಗ ವಿಫಲವಾಗಿದೆ. ಆಯೋಗ ಬಿಜೆಪಿ ಕೈಗೊಂಬೆಯಾಗಿದೆ. ನಾವು ನೀಡಿದ ದೂರಿನ ಬಗ್ಗೆ ವಿಚಾರಣೆ ನಡೆಸುತ್ತಿಲ್ಲ ಎಂದು ಆರೋಪಿಸಿದರು.

ನಿಖಿಲ್ ರಾಜ್ಯಸುತ್ತುವದು ಒಳ್ಳೆಯದು: ಮಳೆ ಹಾನಿ ಬಗ್ಗೆ ಪರಿಶೀಲನೆ ಮಾಡಲು ನಿಖಿಲ್ ಕುಮಾರಸ್ವಾಮಿ ರಾಜ್ಯದ ವಿವಿಧಡೆ ಸಂಚರಿಸುತ್ತಿರುವುದು ಒಳ್ಳೆಯದು. ನಿಖಿಲ್ ತಂದೆಯೇ ಕೇಂದ್ರ ಸಚಿವರಾಗಿದ್ದರಿಂದ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮೊದಲು ಕೇಳಲಿ ಎಂದರು.

ರಾಜ್ಯ ಕೇಂದ್ರಕ್ಕೆ ಹೆಚ್ಚಿನ ತೆರಿಗೆ ನೀಡುತ್ತಿದೆ. ನಾವು ನೀಡುವ ತೆರಿಗೆಯಲ್ಲಿಯೇ ನಮ್ಮ ರಾಜ್ಯಕ್ಕೆ ನೀಡುತ್ತಿಲ್ಲ. ಕಳೆದ ಬಾರಿ ೪.೫೦ ಲಕ್ಷ ಕೋಟಿ ತೆರಿಗೆ ನೀಡಿದ್ದೇವೆ, ಕೇಂದ್ರ ನಮಗೆ ಎಷ್ಟು ವಾಪಸ್ ನೀಡಿದ್ದಾರೆ ಎಂಬುದು ನಿಖಿಲ್ ಉತ್ತರ ನೀಡಲಿ ಎಂದರು. ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಚರ್ಚೆ ನಡೆದಿಲ್ಲ. ಆಕಾಂಕ್ಷಿಗಳು ಇದ್ದಾರೆ. ನಮ್ಮಲ್ಲಿ ಕೆಲವರು ಸಿಎಂ, ಎಐಸಿಸಿ ಅಧ್ಯಕ್ಷರಿಗೆ ಇನ್ನೂ ಕೆಲವರು ಡಿಸಿಎಂ ಅವರಿಗೆ ಮಾತನಾಡಿರುತ್ತಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version