Home ನಮ್ಮ ಜಿಲ್ಲೆ ಕಲಬುರಗಿ ಚಿತ್ತಾಪುರದಲ್ಲಿ RSS ಪಥಸಂಚಲನ: ಹೈಕೋರ್ಟ್‌ ಮಧ್ಯಸ್ಥಿಕೆ — ಅಕ್ಟೋಬರ್‌ 28ರಂದು ಶಾಂತಿ ಸಭೆ ನಡೆಸಲು ನಿರ್ದೇಶನ

ಚಿತ್ತಾಪುರದಲ್ಲಿ RSS ಪಥಸಂಚಲನ: ಹೈಕೋರ್ಟ್‌ ಮಧ್ಯಸ್ಥಿಕೆ — ಅಕ್ಟೋಬರ್‌ 28ರಂದು ಶಾಂತಿ ಸಭೆ ನಡೆಸಲು ನಿರ್ದೇಶನ

0

ಕಲಬುರಗಿ: ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಪಥಸಂಚಲನ ನಡೆಸಲು ತಹಶೀಲ್ದಾರ್‌ ಅವರು ಅನುಮತಿ ನಿರಾಕರಿಸಿದ ಕ್ರಮಕ್ಕೆ ಆಕ್ಷೇಪಿಸಿ ಕಲಬುರಗಿ ಜಿಲ್ಲಾ ಸಂಚಾಲಕ ಅಶೋಕ್‌ ಪಾಟೀಲ್‌ ಸಲ್ಲಿಸಿದ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಿತು.

ವಿಚಾರಣೆ ವೇಳೆ ಹೈಕೋರ್ಟ್‌ ಸರ್ಕಾರಕ್ಕೆ, ಕಾರ್ಯಕ್ರಮ ಸಂಘಟಕರೊಂದಿಗೆ ಅಕ್ಟೋಬರ್‌ 28ರಂದು ಶಾಂತಿ ಸಭೆ (Peace Meeting) ನಡೆಸಿ, ಅದರ ತೀರ್ಮಾನವನ್ನು ಅಕ್ಟೋಬರ್‌ 30ರ ಮಧ್ಯಾಹ್ನ 2:30ರೊಳಗೆ ಕೋರ್ಟ್‌ಗೆ ಸಲ್ಲಿಸಲು ನಿರ್ದೇಶನ ನೀಡಿದೆ. ಎಜಿ ಶಶಿಕಿರಣ ಶೆಟ್ಟಿ ಸರ್ಕಾರದ ಪರವಾಗಿ ವಾದ ಮಂಡಿಸಿಸದರು. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಮ್, ಸತ್ಯನಾರಾಯಣ ಆಚಾರ್ಯ ಕಾಡ್ಲೂರ್ ವಾದ ಮಂಡಿಸಿದರು

ಆರ್‌ಎಸ್‌ಎಸ್‌ ಚಿತ್ತಾಪುರದಲ್ಲಿ ನವೆಂಬರ್‌ 2ರಂದು ಪಥಸಂಚಲನ ನಡೆಸಲು ಅರ್ಜಿ ಸಲ್ಲಿಸಿತ್ತು. ಆದರೆ ಅದೇ ದಿನ 8 ಬೇರೆ ಸಂಘಟನೆಗಳೂ ಪಥಸಂಚಲನಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ ಹಿನ್ನೆಲೆ, ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಉಲ್ಲೇಖಿಸಿ ಚಿತ್ತಾಪುರ ತಹಶೀಲ್ದಾರ್‌ ನಾಗಯ್ಯ ಹಿರೇಮಠ ಅವರು ಅನುಮತಿ ನಿರಾಕರಿಸಿದ್ದರು.

ಹೈಕೋರ್ಟ್‌ ಸರ್ಕಾರಕ್ಕೆ, ಎಲ್ಲ ಸಂಘಟನೆಗಳ ಅಭಿಪ್ರಾಯ ತಿಳಿದು ಶಾಂತಿಪೂರ್ಣವಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದು, ಮುಂದಿನ ವಿಚಾರಣೆ ಅಕ್ಟೋಬರ್‌ 30ಕ್ಕೆ ಮುಂದೂಡಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version