Home ನಮ್ಮ ಜಿಲ್ಲೆ ಕಲಬುರಗಿ ಕಲಬುರಗಿ ಸೇರಿ ವಿವಿಧೆಡೆ ಓಟ್ ಚೋರಿ: ಖರ್ಗೆ ಆರೋಪ

ಕಲಬುರಗಿ ಸೇರಿ ವಿವಿಧೆಡೆ ಓಟ್ ಚೋರಿ: ಖರ್ಗೆ ಆರೋಪ

1

ಕಲಬುರಗಿ: ಕಳೆದ 2019 ರ ಲೋಕಸಭಾ ಚುನಾವಣೆಯಲ್ಲಿ ನನ್ನ ಅಭಿವೃದ್ಧಿ ಕಾರ್ಯಗಳಿಗೆ ಜನ ಮನ್ನಣೆ ಸಿಕ್ಕು ಗೆಲ್ಲುತ್ತೇನೆಂಬ ವಿಶ್ವಾಸವಿತ್ತು. ಆದರೆ ನನ್ನ ನಿರೀಕ್ಷೆ ಹುಸಿಯಾಯಿತು. ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಐದಾರು ಎಂಎಲ್‌ಎ ಕ್ಷೇತ್ರಗಳಲ್ಲಿ ನನಗೆ ಬಹಳ ಕಡಿಮೆ ಮತ ಬಂದಿದ್ದರಿಂದ ಸೋಲಬೇಕಾಯಿತು. ಹೀಗಾಗಿ, ನಮ್ಮ ಕಣ್ಣೆದೆರೆ ಇವಿಎಮ್‌ನಲ್ಲಿ ಮಹಾಮೋಸ ಕಂಡುಬಂದಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

ಕಲಬುರಗಿಯಲ್ಲಿ ಭಾನುವಾರ ಖರ್ಗೆ ಅವರನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 2019 ರ ಚುನಾವಣಾ ಪೂರ್ವದಲ್ಲಿ ಪಾರ್ಲಿಮೆಂಟ್‌ನಲ್ಲಿ `ಖರ್ಗೆ ಬಹುತ್ ಬಾರ್ ಜಿತೇ’ ಅಂತಾ ಪ್ರಧಾನಿ ಮೋದಿ ಹೇಳಿಕೆ ನೀಡಿದರು. ನಂತರ ಪ್ರಧಾನಿ ಮೋದಿ ಈ ರೀತಿ ಹೇಳಿದ ಮೇಲೆ ನನಗೆ ಬಲವಾದ ಅನುಮಾನ ಬಂದಿದೆ. ಕಲಬುರಗಿ ಸೇರಿ ರಾಜ್ಯದ ವಿವಿಧೆಡೆ ಹಾಗೂ ಬಿಹಾರ ರಾಜ್ಯ ಚುನಾವಣೆಗಳಲ್ಲೂ ಮತಗಳವು ಆಗಿದೆ.

ನಾನು ಸಹ ಚುನಾವಣೆಯಲ್ಲಿ ಸೋತಾಗ ಮತಗಳ್ಳತನವಾಗಿದ್ದು ಗೊತ್ತಾಗಿದೆ ಎಂದು ನೋವು ತೋಡಿಕೊಂಡರು. ಅಲ್ಲದೆ ಕರ್ನಾಟಕ ಸರ್ಕಾರ ಬ್ಯಾಲೇಟ್ ಪೇಪರ್ ಮೂಲಕ ಚುನಾವಣೆ ನಡೆಸಲು ಸಚಿವ ಸಂಪುಟ ನಿರ್ಣಯ ತೆಗೆದುಕೊಂಡಿರುವ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಕ್ತವಾಗಿ ಸ್ವಾಗತಿಸಿದರು.

ಪ್ರಧಾನಿ ಮೋದಿಗೆ ಅಹಂಕಾರ: ದೇಶದಲ್ಲಿ ಜಿಎಸ್‌ಟಿ ಕಡಿತ ಬಗ್ಗೆ ಕಳೆದ ಎಂಟು ವರ್ಷಗಳಿಂದ ಕಾಂಗ್ರೆಸ್ ನಿರಂತರವಾಗಿ ಹೋರಾಡುತ್ತಾ ಬಂದಿದೆ. ಆದರೆ ನಮ್ಮ ಬೇಡಿಕೆಗೆ ಕೇಂದ್ರ ಸರ್ಕಾರ ಮನ್ನಣೆ ನೀಡಿರಲಿಲ್ಲ. ಜಿಎಸ್‌ಟಿ ಕಡಿತದಿಂದ ನಮ್ಮ ದೃಷ್ಟಿಯಿಂದ ಬಡ ಜನರಿಗೆ ಅನುಕೂಲವಾಗಿದೆ ಎಂದ ಅವರು, ನಾನು ರಾಜಕೀಯವಾಗಿ ನೋಡಲ್ಲ, ಟೀಕೆಯೂ ಮಾಡಲ್ಲ. ನಾವು ಯಾವಾಗಲೂ ಜನ ಪರ ಇರುವುದರಿಂದ ಸಮಸ್ಯೆಗಳಿಗೆ ಸ್ಪಂದಿಸಿ ಎತ್ತಿ ಹಿಡಿಯುತ್ತೇವೆ ಎಂದರು.

ಯಾವ ಕಾರಣಕ್ಕಾಗಿ ಜಿಎಸ್‌ಟಿ ಕಡಿತದ ಬಗ್ಗೆ ನನಗೂ ಗೊತ್ತಿಲ್ಲ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಿಎಸ್‌ಟಿ ಕಡಿತ ಮಾಡಿರುವ ಬಗ್ಗೆ ಚೆನ್ನಾಗಿ ಗೊತ್ತಿದೆ ಎಂದು ಟೀಕಿಸಿದ ಖರ್ಗೆ, ಕೇಂದ್ರಕ್ಕೆ ನಾವು ಏನಾದರೂ ಸಲಹೆ ಸೂಚನೆ ಕೋಟ್ಟರೆ ನಿರ್ಲಕ್ಷಿಸುತ್ತಿದ್ದರು. ಪ್ರಧಾನಿ ಮೋದಿಗೆ ಅಹಂಕಾರ ಜಾಸ್ತಿ ಆಗಿದೆ. ನಾವು ಏನ್ ಮಾಡಿದರೂ ನಡೆಯುತ್ತೆ ಎಂಬ ಮನೋಭಾವ ಅವರದ್ದಾಗಿದೆ.

ಮುಂದಿನ ದಿನಗಳಲ್ಲಿ ಮೋದಿಯವರಿಗೆ ಅವರ ಅಹಂಕಾರ ಅವರನ್ನೆ ಖಂಡಿತ ತಿನ್ನುತ್ತೆ. ಈ ನಿಟ್ಟಿನಲ್ಲಿ ಅದಕ್ಕೆ ಏನು ಜಾಸ್ತಿ ಹೇಳಲ್ಲ, ಹೇಳಿದರೆ ತಪ್ಪು ಅಭಿಪ್ರಾಯ ಮೂಡಿಸುತ್ತಾರೆ ಎಂದರು.

ಟ್ರಂಪ್‌ನಿಂದ ಏನಾಗಿದೆ : ಪ್ರಧಾನಿ ಮೋದಿ ಮಾತ್ತೆತ್ತಿದ್ದರೆ ಟ್ರಂಪ್ ಟ್ರಂಪ್ ಅಂತಿದ್ದವರು, ನಿತ್ಯ ಬೆಳಗಾದರೆ ಟ್ರಂಪ್ ಪೋನ್ ಮಾಡುತ್ತಾರೆ. ಈಗ ಏನಾಗಿದೆ? ಚೀನಾವನ್ನು ಇಷ್ಟು ದಿನ ನಿರ್ಲಕ್ಷಿಸುತ್ತಿದ್ದವರು, ಈಗ ಅದೇ ದೇಶಕ್ಕೆ ಹೋಗಿ ಬಂದಿದ್ದಾರೆ. ದೇಶಕ್ಕೆ ಸಮಸ್ಯೆ ಬಂದಾಗ ನಾವೆಲ್ಲ ಒಂದಾಗಿದ್ದೇವೆ ಎಂಬ ಸಂದೇಶ ರವಾನಿಸಿ ಬೆಂಬಲಿಸಿದ್ದೇವೆ. ಪಹಲ್ಗಾಮ್ ದಾಳಿ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ಬೆಂಬಲಿಸಿದ್ದೇವೆ ಎಂದರು.

ದ್ವಿಭಾಷಾ ಪದ್ಧತಿ ಜಾರಿಗೆ ಖರ್ಗೆ ಸ್ವಾಗತ: ರಾಜ್ಯದಲ್ಲಿ ದ್ವಿಭಾಷಾ ಪದ್ಧತಿ ಜಾರಿ ಚರ್ಚೆಕ್ಕೆ ಪ್ರತಿಕ್ರಿಯಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದ್ವಿಭಾಷಾ ಪದ್ದತಿ ಜಾರಿ ವಿಚಾರ ಆಯಾ ಸರ್ಕಾರ, ಆಯಾ ಇಲಾಖೆಗೆ ಅಧಿಕಾರವಿದೆ. ಆದರೆ ನಮ್ಮ ರಾಜ್ಯದಲ್ಲಿ ಏನ್ ಮಾಡುತ್ತಾರೆ ಗೊತ್ತಿಲ್ಲ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಾಗಿದೆ. ಆದರೆ ತಮಿಳುನಾಡಿನಲ್ಲಿ, ಕೇರಳದಲ್ಲಿ ಇದು ಒಪ್ಪಲ್ಲ. ನಾವು ಕೂಡ ರಾಷ್ಟ್ರೀಯ ಮಟ್ಟದಲ್ಲಿ ದ್ವಿಭಾಷಾ ಪದ್ದತಿ ಅಳವಡಿಕೆ ಬಗ್ಗೆ ಚಿಂತನೆ ಮಾಡಲಾಗುತ್ತದೆ. ಈ ಹಿಂದೆ ಕೇಂದ್ರದಲ್ಲಿ ಯುಪಿಎ ಸರ್ಕಾರ ವಿದ್ದಾಗ ಚಿಂತಿಸಲಾಗಿತ್ತು.

1 COMMENT

  1. ಈ ಕಾಂಗ್ರೆಸ್ ನವರಿಗೆ ಸೋತ ಕಡೆಯಲ್ಲಾ ಓಟ್ ಚೋರಿ ಓಟ್ ಚೋರಿ ಅಂತ ಡಂಗೂರ ಬಾರಿಸುತ್ತಿದ್ದಾರಲ್ಲಾ ಈ ಖದೀಮರಿಗೆ ತಾವೇ ಎಲ್ಲಾ ಸ್ಥಾನಗಳಲ್ಲಿ ಗೆಲ್ಲಬೇಕೆಂಬ ಹುಂಬತನ ಇದ್ದಲ್ಲಿ ಚುನಾವಣೆ ಏಕೆ ಬೇಕು. ಸರಿ ಅದೇ ಸತ್ಯವಾದರೆ ಚುನಾವಣಾ ಆಯೋಗವನ್ನು ಪ್ರಾರಂಭಿಸಿದರೂ ಇವರೇ ತಾನೆ. ಗೆಲ್ಲುವ ತಾಕತ್ ಇಲ್ಲ, ಭ್ರಷ್ಟಾಚಾರದಲ್ಲಿ ಮುಳುಗಿ ಜನರಿಂದ ಛೀ ಥ್ರೂ ಅಂತ ಊಗಿಸಿಕೊಂಡು ರಾಜಕಿಯದಿಂದಲೇ ನಿರ್ನಾಮವಾಗುವ ಹಂತಕ್ಕೆ ಬಂದು ತಲುಪಿದೆ. ಆದರೂ ಬುದ್ಧಿ ಬಂದಂತಿಲ್ಲ. ಅದರಲ್ಲೂ ಈ ಮುದಿ ಖರ್ಗೆ ಮಾತಾಡಿದರೆ ಬರೀ ಸುಳ್ಳನ್ನೇ ಸಾವಿರ ಬಾರಿ ಬಾಯಿ ಬಡ್ಕೋತಾ ಇದ್ದಾನೆ. ಅಧಿಕಾರಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯಲು ಸಿಧ್ಧ ಅದರಲ್ಲೂ ಮೋದೀಜೀಯವರನ್ನು ನಾಚಿಕೆ ಮಾನ ಮರ್ಯಾದೆ ಎಲ್ಲವನ್ನು ಒತ್ತೆಯಿಟ್ಟು ಬಾಯಿಗೆ ಬಂದಂತೆ ಹುಚ್ಚುಚ್ಚಾಗಿ ಕೆಟ್ಟದಾಗಿ ಬೈಯುವುದನ್ನೇ ತನ್ನ ಸಾಧನೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here

Exit mobile version