Home ನಮ್ಮ ಜಿಲ್ಲೆ ಧಾರವಾಡ ಲಗೇಜ್ ಬಿಟ್ಟು ರೈಲು ಹತ್ತಿದ ಪ್ರಯಾಣಿಕರಿಗೆ ನೆರವು: ಸಿಬ್ಬಂದಿ ತ್ವರಿತ ಸೇವೆಗೆ ಮೆಚ್ಚುಗೆ

ಲಗೇಜ್ ಬಿಟ್ಟು ರೈಲು ಹತ್ತಿದ ಪ್ರಯಾಣಿಕರಿಗೆ ನೆರವು: ಸಿಬ್ಬಂದಿ ತ್ವರಿತ ಸೇವೆಗೆ ಮೆಚ್ಚುಗೆ

1

ಹುಬ್ಬಳ್ಳಿ: ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ರವಿವಾರ ನಡೆದ ಘಟನೆಯೊಂದು ರೈಲ್ವೆ ಸಿಬ್ಬಂದಿಯ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿದೆ.

ಸಕಾಲದಲ್ಲಿ ಸಹಾಯ ಒದಗಿಸಿದ ಕಾರಣದಿಂದಾಗಿ, ಲಗೇಜ್ ಕಳೆದುಕೊಂಡ ಮಹಿಳಾ ಪ್ರಯಾಣಿಕೆಗೆ ತಕ್ಷಣವೇ ನೆರವು ಲಭಿಸಿದೆ.

ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರು ಆಕಸ್ಮಿಕವಾಗಿ ತಮ್ಮ ಲಗೇಜ್ ಒಂದನ್ನು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲೇ ಬಿಟ್ಟು, ವಂದೇ ಭಾರತ್ ಎಕ್ಸಪ್ರೆಸ್ ರೈಲಿನಲ್ಲಿ (ರೈಲು ಸಂಖ್ಯೆ 26751) ಬೆಂಗಳೂರಿಗೆ ಪ್ರಯಾಣ ಮುಂದುವರಿಸಿದರು.

ಲಗೇಜ್ ಬಿಟ್ಟು ಬಂದಿರುವುದು ಅರಿತ ತಕ್ಷಣ ಅವರು ಗಾಬರಿಯಾಗಿದ್ದರು. ಆಗ ಪ್ರಯಾಣಿಕರಿಗೆ ಸಂಚಾರಿ ಟಿಟಿಇ ಗುರು ಹಿರೇಮಠ ಅವರು ಮಾರ್ಗದರ್ಶನ ನೀಡಿ, 139 ಸಹಾಯವಾಣಿಗೆ ಸಂಪರ್ಕಿಸಬೇಕೆಂದು ಸಲಹೆ ನೀಡಿದರು.

ಈ ಮಾಹಿತಿಯಂತೆ, ಪ್ರಯಾಣಿಕರು ಸಹಾಯಕೇಂದ್ರಕ್ಕೆ ಸಂಪರ್ಕಿಸಿದ ತಕ್ಷಣವೇ ಆರ್‌ಪಿಎಫ್ ಸಿಬ್ಬಂದಿ ಹನುಮಂತ ದೂರು ದಾಖಲಿಸಿಕೊಂಡರು. ತಕ್ಷಣವೇ ಹುಬ್ಬಳ್ಳಿಯ ಆರ್‌ಪಿಎಫ್ ಅಧಿಕಾರಿ ಸರೋಜಾ ಅವರೊಂದಿಗೆ ನಿಯಮಿತವಾಗಿ ಸಂಯೋಜನೆ ನಡೆಸಿದರು.

ಸಮಯ ವ್ಯರ್ಥವಾಗದಂತೆ ಲಗೇಜ್‌ನ್ನು ಪತ್ತೆ ಮಾಡಿದ ಆರ್‌ಪಿಎಫ್ ಅಧಿಕಾರಿ ಸರೋಜಾ ಅವರು ಅದನ್ನು ಪ್ರಯಾಣಿಕರ ಸಹೋದರಿಗೆ ಸುರಕ್ಷಿತವಾಗಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಹಸ್ತಾಂತರ ಮಾಡಿದರು.

ರೈಲ್ವೆ ಸಿಬ್ಬಂದಿಯ ಈ ತ್ವರಿತ ಮತ್ತು ಕಾಳಜಿಯುತ ಸೇವಾ ಮನೋಭಾವವನ್ನು ಪ್ರಯಾಣಿಕರು ಹಾಗೂ ಸಾರ್ವಜನಿಕರು ಮೆಚ್ಚಿಕೊಂಡಿದ್ದಾರೆ. ರೈಲ್ವೆ ಸಹಾಯ ಕೇಂದ್ರದ ನಿರಂತರ ಸೇವೆಯಿಂದ ರೈಲ್ವೆಯ ಹಿರಿಮೆ ಮತ್ತಷ್ಟು ಹೆಚ್ಚುತ್ತಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

1 COMMENT

  1. Dive into the vast galaxy of EVE Online. Start your journey today. Create alongside millions of players worldwide. [url=https://www.eveonline.com/signup?invc=46758c20-63e3-4816-aa0e-f91cff26ade4]Play for free[/url]

LEAVE A REPLY

Please enter your comment!
Please enter your name here

Exit mobile version