ಹುಬ್ಬಳ್ಳಿ : ಪ್ರೀಮಿಯಂ ಫ್ರೆಂಚ್ ಪುರುಷರ ಉಡುಪು ಬ್ರ್ಯಾಂಡ್ ಸೆಲಿಯೊ ತನ್ನ ಮೊದಲ ಹುಬ್ಬಳ್ಳಿ ಮಳಿಗೆಯನ್ನು ಇನಾರ್ಬಿಟ್ ಮಾಲ್‌ನಲ್ಲಿ ಪ್ರಾರಂಭಿಸಿದೆ. ಮಳಿಗೆಯನ್ನು ಕನ್ನಡದ ಖ್ಯಾತ ನಟ ಶ್ರೀ ಮುರಳಿ ಉದ್ಘಾಟಿಸಿದರು.
ಇದು ಕರ್ನಾಟಕದ 11ನೇ ಸೆಲಿಯೊ ಮಳಿಗೆಯಾಗಿದ್ದು, ರಾಜ್ಯವನ್ನು ಬ್ರ್ಯಾಂಡ್‌ನ ಪ್ರಮುಖ ಮಾರುಕಟ್ಟೆಯಾಗಿ ಗುರುತಿಸಿದೆ. ಪ್ಯಾರಿಸ್ ಶೈಲಿಯಿಂದ ಪ್ರೇರಿತವಾದ ಈ ಮಳಿಗೆಯಲ್ಲಿ ಕ್ಯಾಶುಯಲ್, ಫಾರ್ಮಲ್ ಹಾಗೂ ಡೆನಿಮ್ ಉಡುಪುಗಳ ವೈವಿಧ್ಯಮಯ ಶ್ರೇಣಿಯನ್ನು ಗ್ರಾಹಕರಿಗೆ ಲಭ್ಯವಿದೆ.
ಸೆಲಿಯೊ ಇಂಡಿಯಾ ಮಾರ್ಕೆಟಿಂಗ್ ಮುಖ್ಯಸ್ಥ ರೆಜಾಯ್ ರಾಜನ್ ಅವರು, “ಹುಬ್ಬಳ್ಳಿ ವಿಕಸನಗೊಳ್ಳುತ್ತಿರುವ ನಗರ ಸಂಸ್ಕೃತಿಯು ವಿಸ್ತರಣೆಗೆ ನೈಸರ್ಗಿಕ ಆಯ್ಕೆಯಾಗಿದೆ. ನಾವು ಪ್ಯಾರಿಸ್ ಫ್ಯಾಷನ್ ಅನ್ನು ಹೆಚ್ಚು ಜನರಿಗೆ ತಲುಪಿಸಲು ಬಯಸುತ್ತೇವೆ” ಎಂದರು.