Home ನಮ್ಮ ಜಿಲ್ಲೆ ದಾವಣಗೆರೆ ಮಧ್ಯಪ್ರಾಚ್ಯ ಬಿಕ್ಕಟ್ಟು: ದುಬೈನಲ್ಲಿ ದಾವಣಗೆರೆಯ 9 ಮಂದಿ ಸಿಲುಕಿದರು – ಜಿಲ್ಲಾಡಳಿತ ಸಕ್ರಿಯ

ಮಧ್ಯಪ್ರಾಚ್ಯ ಬಿಕ್ಕಟ್ಟು: ದುಬೈನಲ್ಲಿ ದಾವಣಗೆರೆಯ 9 ಮಂದಿ ಸಿಲುಕಿದರು – ಜಿಲ್ಲಾಡಳಿತ ಸಕ್ರಿಯ

0
ಮಧ್ಯಪ್ರಾಚ್ಯ ಬಿಕ್ಕಟ್ಟು: ದುಬೈನಲ್ಲಿ ದಾವಣಗೆರೆಯ 9 ಮಂದಿ ಸಿಲುಕಿದರು – ಜಿಲ್ಲಾಡಳಿತ ಸಕ್ರಿಯ

ದಾವಣಗೆರೆ: ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ವಿಮಾನಯಾನ ಸೇವೆಗಳು ವ್ಯತ್ಯಯಗೊಂಡಿದ್ದು, ಇರಾನ್, ಇಸ್ರೇಲ್ ಹಾಗೂ ಯುಎಇ ಸೇರಿದಂತೆ ಹಲವು ದೇಶಗಳ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ಪರಿಸ್ಥಿತಿಯಿಂದಾಗಿ ದಾವಣಗೆರೆ ಜಿಲ್ಲೆಯ ಒಟ್ಟು 9 ನಾಗರಿಕರು ಪ್ರಸ್ತುತ ದುಬೈನಲ್ಲಿ ಸಿಲುಕಿಕೊಂಡಿರುವುದು ವರದಿಯಾಗಿದೆ.

ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಈ ಕುರಿತು ಮಾಹಿತಿ ನೀಡಿದ್ದು, ಸಂಕಷ್ಟದಲ್ಲಿರುವ ನಾಗರಿಕರ ನೆರವಿಗಾಗಿ ಜಿಲ್ಲಾಡಳಿತ ತಕ್ಷಣ ಕಾರ್ಯಪ್ರವೃತ್ತವಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನೇಮಕಾತಿ ಪ್ರಕ್ರಿಯೆ ಹಳೇ ಪದ್ಧತಿಯಲ್ಲೇ ಮುಂದುವರಿಕೆ: ಜಾರಕಿಹೊಳಿ

24×7 ತುರ್ತು ಕಾರ್ಯಾಚರಣೆ ಕೇಂದ್ರ : ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ 24×7 ಕಾರ್ಯನಿರ್ವಹಿಸುತ್ತಿದೆ. ಸಹಾಯವಾಣಿಗೆ ಜಿಲ್ಲೆಯ ಜಗಳೂರು ತಾಲೂಕಿನ 8 ಮಂದಿ ಹಾಗೂ ಚನ್ನಗಿರಿ ತಾಲೂಕಿನ ಒಬ್ಬರು ಕರೆ ಮಾಡಿ ದುಬೈನಲ್ಲಿ ಸಿಲುಕಿರುವ ಮಾಹಿತಿ ನೀಡಿದ್ದಾರೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಿಲ್ಲೆಯ ಪ್ರಯಾಣಿಕರು ಅಥವಾ ಅವರ ಸಂಬಂಧಿಕರು ಹೆಚ್ಚಿನ ಮಾಹಿತಿಗಾಗಿ ಹಾಗೂ ತುರ್ತು ನೆರವಿಗಾಗಿ 08192-234034 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಸೂಚಿಸಲಾಗಿದೆ.

ಇದನ್ನೂ ಓದಿ: CM ಬದಲಾವಣೆ ಗೊಂದಲಕ್ಕೆ ಹೈಕಮಾಂಡ್ ಸ್ಪಷ್ಟನೆ ಅಗತ್ಯ: ಸತೀಶ್ ಜಾರಕಿಹೊಳಿ

ರಾಯಭಾರ ಕಚೇರಿ ಮಾರ್ಗಸೂಚಿ ಪಾಲನೆಗೆ ಮನವಿ : ಬಾಧಿತ ದೇಶಗಳಲ್ಲಿ ಇರುವ ದಾವಣಗೆರೆಯ ನಾಗರಿಕರು ಭಾರತೀಯ ರಾಯಭಾರ ಕಚೇರಿ ನೀಡುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ತಕ್ಷಣವೇ ‘ಸಾರಥಿ’ ಸಹಾಯತಾ ಪೋರ್ಟಲ್‌ನಲ್ಲಿ ತಮ್ಮ ವಿವರಗಳನ್ನು ನೋಂದಾಯಿಸಿಕೊಳ್ಳಲು ಮನವಿ ಮಾಡಲಾಗಿದೆ.

ಯುಎಇಯಲ್ಲಿರುವವರು ಭಾರತೀಯ ರಾಯಭಾರ ಕಚೇರಿಯ ಸಹಾಯವಾಣಿ ಸಂಖ್ಯೆ 800-46342 ಅಥವಾ ವ್ಯಾಟ್ಸಾಪ್ ಸಂಖ್ಯೆ +971543090571 ಮೂಲಕ ಸಂಪರ್ಕಿಸಬಹುದಾಗಿದೆ.

ಇದನ್ನೂ ಓದಿ: KIADB ಸ್ಥಳಾಂತರ ಸ್ಥಗಿತ: ಪಾಟೀಲರ ನಿರ್ಧಾರಕ್ಕೆ ಜೋಶಿ ಅಭಿನಂದನೆ

ಕೇಂದ್ರ ಸರ್ಕಾರಕ್ಕೆ ಮಾಹಿತಿ : ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವು ದಾವಣಗೆರೆ ಜಿಲ್ಲೆಯಿಂದ ಬಂದ ಮಾಹಿತಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ರವಾನಿಸಿದ್ದು, ಅಗತ್ಯ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.