ಬಳ್ಳಾರಿ: ಬಳ್ಳಾರಿಯ ಮಾಜಿ ಕಾರ್ಪೊರೇಟರ್ ಕುಮಾರಸ್ವಾಮಿ ಮತ್ತು ಅವರ ಮಗ ಹಾಲಿ ಪಾಲಿಕೆ ಸದಸ್ಯ ಗೋವಿಂದ ರಾಜು ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಳ್ಳಾರಿ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ಎನ್ ಗೋವಿಂದರಾಜು ಅವರ ನಿವಾಸ ಬಳ್ಳಾರಿಯ ಗಾಂಧಿನಗರದಲ್ಲಿದೆ.
ಮೊಟ್ಟೆ ವ್ಯಾಪಾರ ಸೇರಿದಂತೆ ಹಲವು ಉದ್ಯಮದಲ್ಲಿ ತೊಡಗಿಸಿಕೊಂಡಿರೋ ಕುಮಾರಸ್ವಾಮಿ. ಉದ್ಯಮಿ ಕುಮಾರಸ್ವಾಮಿ ಮಗ ಗೋವಿಂದ ರಾಜು ಪಾಲಿಕೆ ಸದಸ್ಯರಿದ್ದಾರೆ.ಬೆಂಗಳೂರಿನಿಂದ ಇನ್ನೋವ ಕಾರಿನಲ್ಲಿ ಬಂದಿರೋ ಸಿಬಿಐ ಅಧಿಕಾರಿಗಳ ತಂಡ ದಾಳಿ ಮಾಡಿದೆ.
ನಾಗೇಂದ್ರಗೆ ಶಾಕ್: ಸಿಬಿಐ ನಡೆಸಿದ ದಾಳಿಯಿಂದ ಹುಟ್ಟುಹಬ್ಬದ ದಿನವೇ ಮಾಜಿ ಸಚಿವ ಬಿ ನಾಗೇಂದ್ರ ಗೆ ಶಾಕ್ ನೀಡಿದಂತಾಗಿದೆ. ವಾಲ್ಮೀಕಿ ಹಗಣದ ಹಿನ್ನೆಲೆ ನಡೆದಿರೋ ದಾಳಿ ಎನ್ನಲಾಗುತ್ತಿದೆ. ನೆಕ್ಕಂಟಿ ನಾಗರಾಜ್ ಅಕೌಂಟ್ ನಿಂದ ಕಾರ್ಪೋರೆಟರ್ ಗೋವಿಂದ ರಾಜು ಅಕೌಂಟ್ ಗೆ ಹಣ ವರ್ಗಾವಣೆಯಾಗಿತ್ತು.
ಕಾರ್ಪೋರೆಟೇಟರ್ ಗೋವಿಂದ ರಾಜು ವಿವಿಧ ಕಡೆ ಹಣ ಹೂಡಿಕೆ ಮಾಡಿದ್ದರು ಎನ್ನಲಾಗಿದೆ. ರಾಜ್ಯ ಹೊರ ರಾಜ್ಯಕ್ಕೆ ಮೊಟ್ಟೆ ವ್ಯಾಪಾರ ಮಾಡುವ ಉದ್ಯಮಿ ಕುಮಾರಸ್ವಾಮಿ ಮತ್ತು ಆತನ ಮಗ ಗೋವಿಂದರಾಜು ಅಕೌಂಟ್ ನಲ್ಲಿ ಕೋಟ್ಯಾಂತರ ವಹಿವಾಟು ನಡೆದಿದೆ. ಈ ಹಿನ್ನೆಲೆಯಲ್ಲಿ ದಾಳಿಯಾಗಿದೆ.
ವಾಲ್ಮೀಕಿ ಹಗರಣಕ್ಕೂ ಮುನ್ನ ಕಾರ್ಪೋರೆಟರ್ ಗೋವಿಂದರಾಜು ಮನೆಯನ್ನು ನಾಗೇಂದ್ರ ಅವರಿಗೆ ಮಾರಾಟ ಮಾಡಲಾಗಿತ್ತು. ಆದ್ರೇ ಖರೀದಿಯಾಗಿರಲಿಲ್ಲ ಹಣದ ವಹಿವಾಟು ಮಾತ್ರ ಆಗಿತ್ತು. ಈ ಹಿನ್ನೆಲೆ ದಾಳಿಯಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ.