Home ನಮ್ಮ ಜಿಲ್ಲೆ ಬಾಗಲಕೋಟೆ ಬಾಗಲಕೋಟೆ: ಗಮನ ಸೆಳೆಯುವ `ಸೆಗಣಿ ಗಣೇಶ’

ಬಾಗಲಕೋಟೆ: ಗಮನ ಸೆಳೆಯುವ `ಸೆಗಣಿ ಗಣೇಶ’

0

ಮಲ್ಲಿಕಾರ್ಜುನ ರಾಜನಾಳ
ಗುಳೇದಗುಡ್ಡ: ಸೆಗಣಿ ಎಂದರೇನೆ ಮಾರುದ್ದ ಓಡುವವರು ಇರುವ ಇಂದಿನ ದಿನಗಳಲ್ಲಿ ಗುಳೇದಗುಡ್ಡದಲ್ಲಿ ಸೆಗಣಿ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ಪಟ್ಟಣದ ಚೌಬಜಾರದಲ್ಲಿ ಗೋಮಯ ಸೆಗಣಿಯಿಂದ ಸಿದ್ಧಪಡಿಸಿದ ಆಕರ್ಷಕ ಗಣೇಶ ಮೂರ್ತಿಗಳು ನೋಡುಗರ ಗಮನ ಸೆಳೆಯುತ್ತಿವೆ.

ಆಗಸ್ಟ್‌ 27ರಂದು ಗಣೇಶ ಚತುರ್ಥಿ. ಪ್ರತಿ ಮನೆ ಮನೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಪರಿಸರ ಸ್ನೇಹಿ, ಸೆಗಣಿ ಗಣೇಶ ಪ್ರತಿಷ್ಠಾಪಿಸಲು ಇಲ್ಲಿ ಸಿದ್ಧಗೊಂಡಿದ್ದಾನೆ.

ಪೂಜೆಗೆ ಅತ್ಯಂತ ಶ್ರೇಷ್ಠವಾದ ಪರಿಸರ ಸ್ನೇಹಿ ಮತ್ತು ದೇಸಿ ಹಸುವಿನ ಸೆಗಣಿಯಿಂದ ತಯಾರಿಸಿದ ಗಣೇಶ ಮೂರ್ತಿಗಳು ಮಾರುಕಟ್ಟೆಗಳಲ್ಲಿ ರಾರಾಜಿಸುತ್ತಿವೆ. ದೇಸಿ ಹಸುವಿನ ಸೆಗಣಿಯಿಂದ ಮಾಡಿದ ಈ ಗಣೇಶ ಮೂರ್ತಿಗಳನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸುವುದರಿಂದ ಹಸುವಿನ ಜೊತೆಗೆ ಗಣೇಶನನ್ನೂ ಪೂಜಿಸಿದಂತಾಗುತ್ತದೆ. ಬಳಿಕ ಸೆಗಣಿ ಗಣೇಶನನ್ನು ಮನೆಯ ನೀರಿನಲ್ಲಿ ವಿಸರ್ಜಿಸಿ ನಂತರ ಆ ನೀರನ್ನು ಗಿಡಗಳಿಗೆ ಹಾಕುವುದರಿಂದ ಅದು ಗೊಬ್ಬರವಾಗಿ ಗಿಡಗಳಿಗೆ ಪೋಷಣೆ ನೀಡುತ್ತದೆ ಎನ್ನುತ್ತಾರೆ ಸೆಗಣಿ ಗಣೇಶ ತಯಾರಕ ವಿಜಯ ಕವಿಶೆಟ್ಟಿ.

ಸರಕಾರ ನಿಷೇಧಿಸಿದ್ದರೂ ಅಲ್ಲಲ್ಲಿ ಪಿಓಪಿ ಗಣಪತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇದರ ಪರಿಣಾಮ ಪರಿಸರ ಸ್ನೇಹಿ ಮಣ್ಣಿನ ಹಾಗೂ ಇತರೆ ಪರಿಸರಕ್ಕೆ ಪೂರಕ ವಸ್ತುಗಳಿಂದ ಸಿದ್ಧಪಡಿಸಿದ ಗಣಪತಿಗಳ ಮಾರಾಟಕ್ಕೆ ಹಿನ್ನಡೆ ಉಂಟಾಗುತ್ತಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version