Home ಸುದ್ದಿ ದೇಶ ಗೋವಾ: ರಾಷ್ಟ್ರೀಯ ಹೆದ್ದಾರಿ ಬಂದ್ ಮುಂದೂಡಿಕೆ

ಗೋವಾ: ರಾಷ್ಟ್ರೀಯ ಹೆದ್ದಾರಿ ಬಂದ್ ಮುಂದೂಡಿಕೆ

0

ಪಣಜಿ: ಗೋವಾದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿನ ಪರ್ವರಿಯ ಕೊಕೆರೊ ಸರ್ಕಲ್‌ನಿಂದ ಮಾಲ್ ದೆ ಗೋವಾ ವರೆಗಿನ ರಸ್ತೆಯನ್ನು ಆಗಸ್ಟ್ 24 ರಿಂದ 31 ಜನವರಿ 26 ರ ವರೆಗೆ ಎಲ್ಲ ಪ್ರಕಾರದ ವಾಹನಗಳ ಓಡಾಟಕ್ಕೆ ಸಂಪೂರ್ಣವಾಗಿ ನಿಷೇಧ ಹೇರಲು ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ ಈ ಕುರಿತಂತೆ ಲೋಕೋಪಯೋಗಿ ಇಲಾಖೆಯು ಕೊಂಚ ಬದಲಾವಣೆ ಮಾಡಿದೆ. ಈ ಮಾರ್ಗದಲ್ಲಿ ಓಡಾಟ ನಡೆಸುವ ಜನತೆಗೆ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಓಡಾಟ ನಡೆಸಲು ತೊಂದರೆಯುಂಟಾಗಲಿದೆ ಎಂಬ ಕಾರಣಕ್ಕೆ ಈ ಹೆದ್ದಾರಿಯನ್ನು ಗಣೇಶ ಚತುರ್ಥಿಯ ನಂತರ ಬಂದ್ ಮಾಡುವ ನಿರ್ಣಯ ತೆಗೆದುಕೊಳ್ಳಲಾಗಿದೆ.

ಈ ಹೆದ್ದಾರಿ ಬಂದ್ ಮಾಡುವ ಮುಂದಿನ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಿರುವುದಾಗಿ ಲೋಕೋಪಯೋಗಿ ಇಲಾಖೆ ಮಾಹಿತಿ ನೀಡಿದೆ. ಪರ್ವರಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ 6ವೇ ಫ್ಲೈಓವರ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಫ್ಲೈಓವರ್‌ನ ದೊಡ್ಡ ಭಾಗವನ್ನು ಅಳವಡಿಸಬೇಕಿದೆ. ಈ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ರಾಷ್ಟ್ರೀಯ ಹೆದ್ದಾರಿಯ ಈ ಭಾಗದಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡುವ ಅನಿವಾರ್ಯತೆಯಿದೆ.

ಇದರಿಂದಾಗಿ ಪರ್ವರಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಸುಮಾರು 5 ತಿಂಗಳು ಬಂದ್ ಮಾಡುವ ನಿರ್ಣಯವನ್ನು ತೆಗೆದುಕೊಳ್ಳಲಾಗಿತ್ತು. ಆದರೆ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಈ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದರೆ ಜನತೆಗೆ ಭಾರಿ ತೊಂದರೆಯುಂಟಾಗಲಿದೆ ಎಂಬ ಅಂಶವನ್ನು ಗಣನೆಗೆ ತೆಗೆದುಕೊಂಡ ಇಲಾಖೆ ಗಣೇಶ ಚತುರ್ಥಿಯ ನಂತರ ಮಾಡುವುದಾಗಿ ಮಾಹಿತಿ ನೀಡಿದೆ.

ಪರ್ವರಿ ಭಾಗದ ರಾಷ್ಟ್ರೀಯ ಹೆದ್ದಾರಿಯು ಮುಂಬಯಿ ಭಾಗದಿಂದ ಮಂಗಳೂರು ಭಾಗಕ್ಕೆ ಸಂಪರ್ಕಿಸುವ ಮುಖ್ಯ ರಾಷ್ಟ್ರೀಯ ಹೆದ್ದಾರಿಯಾಗಿದೆ. ಇದರಿಂದಾಗಿ ಈ ರಸ್ತೆಯಲ್ಲಿ ಸಹಜವಾಗಿಯೇ ವಾಹನ ಸಂಚಾರ ಹೆಚ್ಚಾಗಿರುತ್ತದೆ. ಇದೀಗ ಗಣೇಶ ಚತುರ್ಥಿಯ ಸಂದರ್ಭದಲ್ಲಿ ವಾಹನ ದಟ್ಟಣೆ ಇನ್ನಷ್ಟು ಹೆಚ್ಚಾಗುತ್ತದೆ. ಈ ರಾಷ್ಟ್ರೀಯ ಹೆದ್ದಾರಿಯನ್ನು ಈ ಸಂದರ್ಭದಲ್ಲಿ ಬಂದ್ ಮಾಡಿದರೆ ಹೆಚ್ಚಿನ ತೊಂದರೆಯುಂಟಾಬಹುದು ಎಂಬುದನ್ನು ಲೋಕೋಪಯೋಗಿ ಇಲಾಖೆ ಗಣನೆಗೆ ತೆಗೆದುಕೊಂಡಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version