ರಾಯಣ್ಣ ವೃತ್ತದಲ್ಲಿ ಕಾಮುಕರಿಗೆ ತಕ್ಕ ಶಾಸ್ತಿ ಮಾಡಿದ ಹೆಣ್ಮಕ್ಕಳು!

0
11
ಬೆಳಗಾವಿ ನಾಟಕ

ಬೆಳಗಾವಿ: ಚೆನ್ನಮ್ಮ ವೃತ್ತದಲ್ಲಿ ಕಾಲಿಡಲೂ ಜಾಗವಿಲ್ಲದಷ್ಟು ಜನದಟ್ಟಣೆ, ಎಲ್ಲರಲ್ಲಿಯೂ ರಾಜ್ಯೋತ್ಸವದ ಗುಂಗು, ಹಾಡಿನ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸುತ್ತಿರುವ ಜನಸ್ತೋಮದಿಂದ ಅನತಿ ದೂರದಲ್ಲಿ ಅಂದರೆ ಗಣಪತಿ ದೇವಾಲಯದ ಎದುರು ಎಲ್ಲರ ಕಣ್ಮುಂದೆಯೇ ಬಾಲಕಿಯೊಬ್ಬಳ ಮೇಲೆ ಕಾಮುಕರ ತಂಡ ಎರಗಿ ಆಕೆಯ ಅತ್ಯಾಚಾರಕ್ಕೆ ಯತ್ನಿಸುತ್ತದೆ.
ಈ ದೃಶ್ಯವನ್ನು ಕಂಡು ನೆರೆದವರು ಅಚ್ಚರಿಗೊಂಡರೂ ಯಾರೂ ಬಿಡಿಸಲು ಮುಂದಾಗುವುದಿಲ್ಲ.
ಅಷ್ಟರಲ್ಲಿ ಅಲ್ಲಿಗೆ ಬಂದ ಯುವತಿಯರಿಬ್ಬರು ಕಾಮುಕರಿಂದ ಈ ಬಾಲಕಿಯನ್ನು ಕಾಮುಕರಿಂದ ರಕ್ಷಿಸಿ ಕಾಮುಕರಿಗೆ ತಕ್ಕ ಶಾಸ್ತಿ ಮಾಡಿ, ಹೆಣ್ಣು ಮಕ್ಕಳನ್ನು ಗೌರವಿಸುವ ಪಾಠ ಕಲಿಸುತ್ತಾರೆ. ಹೌದು, ಅಲ್ಲಿ ನೆರೆದವರೆಲ್ಲಾ ಮೈಯೆಲ್ಲಾ ಕಣ್ಣಾಗಿ ಈ ದೃಶ್ಯವನ್ನು ನೋಡುತ್ತಾರೆ. ನಮ್ಮ ನಿಮ್ಮನ್ನೆಲ್ಲಾ ಹೆತ್ತ ತಾಯಿ ಹೆಣ್ಣು, ಅವಳನ್ನು ಗೌರವಿಸುವುದನ್ನು ಮೊದಲು ಕಲಿಯಿರಿ, ನೀವೆಲ್ಲಾ ಚೆನ್ನಮ್ಮನ ನಾಡಿನವರು… ನಮಗೆ ಚೆನ್ನಮ್ಮಳೇ ಸ್ಫೂರ್ತಿ ಎಂದು ಆ ಯುವತಿಯರು ಹೇಳುವಾಗ ಎಲ್ಲೆಡೆಯಿಂದ ಚಪ್ಪಾಳೆಯ ಸುರಿಮಳೆ.
ಹೌದು, ಕಾಮುಕರಿಗೆ ತಕ್ಕ ಶಾಸ್ತಿ ಮಾಡುವ ಈ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟಿದ್ದು, ಎಂಟನೇ ತರಗತಿಯ ವಿದ್ಯಾರ್ಥಿನಿ ವಚನಾ ದೇಸಾಯಿ ಮತ್ತು ತಂಡ. ತಂಡದಲ್ಲಿ ದೇವಯಾನಿ ಪಾಟೀಲ, ಅರುಣಾ ಹಾಗೂ ಕರಾಟೆ ಹುಡುಗರು ಇದ್ದಾರೆ.

Previous articleಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು…. ಗೀತೆಗೆ ಹೆಜ್ಜೆ ಹಾಕಿದ ಆಯುಕ್ತ
Next articleರೇಣುಕಾಚಾರ್ಯ ಸಹೋದರನ ಮಗ ನಾಪತ್ತೆ!