Home ನಮ್ಮ ಜಿಲ್ಲೆ ಕಲಬುರಗಿ ಪ್ರಕಾಶ ರೈ ಕಾರ್ಯಕ್ರಮಕ್ಕೆ ವಿರೋಧ: ಕಪ್ಪು ಪಟ್ಟಿ ಹಿಡಿದವರ ಬಂಧನ

ಪ್ರಕಾಶ ರೈ ಕಾರ್ಯಕ್ರಮಕ್ಕೆ ವಿರೋಧ: ಕಪ್ಪು ಪಟ್ಟಿ ಹಿಡಿದವರ ಬಂಧನ

0

ಕಲಬುರಗಿ: ಕಲಬುರಗಿಗೆ ಬಹುಭಾಷಾ ಖ್ಯಾತ ನಟ ಪ್ರಕಾಶ್ ರಾಜ್ ರೈ ಆಗಮನಕ್ಕೆ ವಿರೋಧಿಸಿದ ಹಿಂದೂ ಜಾಗೃತ ಸೇನೆ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಕಲಬುಗರಿ ನಗರಕ್ಕೆ ರೈಗೆ ನಿರ್ಭಂದ ಹೇರುವಂತೆ‌ ಪ್ರತಿಭಟನೆ ನಡೆಸುತ್ತಿದ್ದರು. ಕಪ್ಪು ಬಟ್ಟಿ ತೋರಿಸಿ ನಗರದ ಜಗತ್ ವೃತ್ತದಿಂದ ಪ್ರತಿಭಟನೆ ನಡೆಸುತ್ತಿರುವ ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಗತ್ ವೃತ್ತದಲ್ಲೇ ಪ್ರತಿಭಟನಾಕಾರರನ್ನು ತಡೆದಿದ್ದು, ಲಕ್ಷ್ಮಿಕಾಂತ್ ಸ್ವಾದಿ‌ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ‌‌ ಮಾಡುತ್ತಿದ್ದರು. ಗಾಯಾಳು‌ ನಾಟಕ ಹಾಗೂ‌ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿರುವ ಪ್ರಕಾಶ್ ರೈ‌ ಅವರಿಗೆ ವಿರೋಧಿಸಲಾಗಿತ್ತು. ಕೋಮು ಭಾವನೆಗೆ ಧಕ್ಕೆ ತರುವಂತೆ ಪ್ರಚೋದನಾತ್ಮಕ ಪ್ರಕಾಶ್ ರಾಜ್ ರೈಗೆ ನಿರ್ಭಂದ ಹೇರುವಂತೆ ನಿನ್ನೆ‌ ಮನವಿ ಸಲ್ಲಿಸಲಾಗಿತ್ತು.

https://twitter.com/samyuktakarnat2/status/1700853211370823973

Exit mobile version