Home ನಮ್ಮ ಜಿಲ್ಲೆ ಧಾರವಾಡ ಪರೋಟಾ ತಯಾರಿಕಾ ಘಟಕದ ಮೇಲೆ ಪಾಲಿಕೆ ಅಧಿಕಾರಿಗಳ ದಾಳಿ: ಏಳು ದಿನದಲ್ಲಿ ಘಟಕ ಬಂದ್ ಮಾಡಲು...

ಪರೋಟಾ ತಯಾರಿಕಾ ಘಟಕದ ಮೇಲೆ ಪಾಲಿಕೆ ಅಧಿಕಾರಿಗಳ ದಾಳಿ: ಏಳು ದಿನದಲ್ಲಿ ಘಟಕ ಬಂದ್ ಮಾಡಲು ಸೂಚನೆ

0


ಹುಬ್ಬಳ್ಳಿ: ಬೇಕಾಬಿಟ್ಟಿ ಪರೋಟ ತಯಾರು ಮಾಡುತ್ತಿದ್ದ ಘಟಕದ ಮೇಲೆ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿದ್ದು, ಏಳು ದಿನದಲ್ಲಿ ಘಟಕ ಬಂದ್ ಮಾಡುವಂತೆ ಸೂಚಿಸಿದ್ದಾರೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ. ಶ್ರೀಧರ್ ದಂಡಪ್ಪನವರ ಅವರು ದಾಳಿ ನಡೆಸಿದ್ದಾರೆ.
ವಾರ್ಡ್ ಸಂಖ್ಯೆ 76 ರಲ್ಲಿ ಬರುವ ಇಸ್ಲಾಂಪುರ ಪರೋಟ ತಯಾರಿಕಾ ಘಟಕದ ಮೇಲೆ ದಾಳಿ ಮಾಡಲಾಗಿದೆ.
ಪಾಲಿಕೆ ಸದಸ್ಯರ ದೂರಿನ ಮೇರೆಗೆ ಪರೋಟ ತಯಾರಿಕೆ ಪ್ಯಾಕ್ಟರಿಗೆ ಭೇಟಿ ನೀಡಿದ ಅಧಿಕಾರಿಗಳು, ವ್ಯವಸ್ಥೆ ಇಲ್ಲದೆ ಬೇಕಾಬಿಟ್ಟಿಯಾಗಿ, ಸ್ವಚ್ಛತೆ ಕಾಪಾಡಿಕೊಳ್ಳದೆ ಗ್ಲೌಸ್ ಹಾಕಿಕೊಳ್ಳದೆ ಪರೋಟ್ ತಯಾರಿಸುತ್ತಿರುವದನ್ನು ಪರಿಶೀಲಿಸಿ ಹಾಗೂ ಅನಾರೋಗ್ಯಕರ ವಾತಾವರಣದಲ್ಲಿ ತಯಾರಿ ಮಾಡುತ್ತಿದ್ದರಿಂದ 7 ದಿನದಲ್ಲಿ ಬಂದ್ ಮಾಡುವಂತೆ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.

Exit mobile version