Home ನಮ್ಮ ಜಿಲ್ಲೆ ಕೊಪ್ಪಳ ಕನ್ನಾಳ ಗುಡ್ಡದಲ್ಲಿ ಚಿರತೆ ಸೆರೆ

ಕನ್ನಾಳ ಗುಡ್ಡದಲ್ಲಿ ಚಿರತೆ ಸೆರೆ

0

ಕುಷ್ಟಗಿ: ತಾಲೂಕಿನ ಕನ್ನಾಳ ಗುಡ್ಡದಲ್ಲಿ ಕಳೆದ ಹಲವಾರು ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಚಿರತೆ ಅಂತೂ ಇಂತೂ ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ, ಚಿರತೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಚಿರತೆ ಹಾವಳಿಯಿಂದ ಸಾರ್ವಜನಿಕರು, ರೈತರು ಬೇಸತ್ತಿದ್ದು, ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದರು. ಅರಣ್ಯ ಇಲಾಖೆ ವಲಯ ಅರಣ್ಯ ಅಧಿಕಾರಿ ಚೈತ್ರಾ ಮೆಣಸಿನಕಾಯಿ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ಕಳೆದ ಮೂರು ನಾಲ್ಕು ದಿನಗಳ ಹಿಂದೆ ಬೋನಿಟ್ಟಿದ್ದರು.
ಕುಷ್ಟಗಿ ತಾಲೂಕಿನ ಕನ್ಮಾಳ, ಗೆದ್ದರಹಟ್ಟಿ, ಈ ಎರಡು ಗ್ರಾಮಗಳ ವ್ಯಾಪ್ತಿಯಲ್ಲಿ ಬರುವಂತಹ ಗುಡ್ಡದಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಪದೇ ಪದೇ ಕಾಣಿಸಿಕೊಳ್ಳುತ್ತಿತ್ತು ಇದರಿಂದಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ತಿಳಿಸಿದರು ಹೀಗಾಗಿ ಚಿರತೆ ಸೆರೆ ಸಿಕ್ಕಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಚಿರತೆ ಹಾಗೂ ಕರಡಿಗಳು ಆಗಾಗ ಈ ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದು ಸುತ್ತಲಿನ ತೋಟದ ಮಾಲೀಕರಲ್ಲಿ ಆತಂಕಗೊಂಡು ಭಯಭೀತಿಯಲ್ಲಿ ಕಾಲ ಕಳೆಯುತ್ತಿದ್ದು ಸೆರೆ ಹಿಡಿದ ಚಿರತೆ ಹಾಗೂ ಕರಡಿಗಳನ್ನು ಇಲ್ಲಿಯೇ ಸಮೀಪದಲ್ಲಿರುವ ಗುಡ್ಡಗಳಲ್ಲಿ ಬಿಟ್ಟು ಬರುತ್ತಿದ್ದಾರೆಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಉಪ ವಲಯ ಅರಣ್ಯ ಅಧಿಕಾರಿ ಮಹಮ್ಮದ್ ರಿಯಾಜ್,ಹನುಮಂತಪ್ಪ, ಮಹಾಂತೇಶ್ ರೆಡ್ಡಿರ್, ಗಂಗಾಧರ್, ಛತ್ರಪ್ಪ, ತಿಪ್ಪಣ್ಣ, ಲಕ್ಷ್ಮಣ, ಚೆನ್ನಪ್ಪ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.

Exit mobile version