ಎಫ್ ಡಿಎ ಪರೀಕ್ಷೆ ಅಕ್ರಮ: ಮೊಬೈಲ್ ಬಳಕೆ ಬಗ್ಗೆ ಎಫ್ ಐಎಸ್ ಎಲ್ ಗೆ ರವಾನೆ

0
24

ಕಲಬುರಗಿ: ಎಫ್ ಡಿಎ ಪರೀಕ್ಷೆ ಯಲ್ಲಿ ಅಕ್ರಮವಾಗಿ ಬ್ಲೂಟೂತ್ ಡಿವೈಸ್ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಲೂಟೂತ್ ಕನೆಕ್ಟ್ ಮಾಡಲಾದ ಸ್ಮಾರ್ಟ್ ಮೊಬೈಲ್ ಗಳನ್ನು ಎಫ್ ಐಎಸ್ ಎಲ್ ಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಎಲ್ಲ ಮೊಬೈಲ್ ಗಳು ಫ್ಲ್ಯಾಶ್‌‌‌ ಆಗಿದ್ದರಿಂದ ಕೊನೆಯ ಕಾಲ್ ಯಾರಿಗೆ ಹೋಗಿದೆ. ಏನೆಲ್ಲ ದತ್ತಾಂಶ ಇತ್ತು ಎಂಬುದು ಪತ್ತೆಹಚ್ಚಿದ ಮೇಲೆ ಅಕ್ರಮ ಹೊರಬರಲಿದೆ. ಇನ್ನೂ ಕಿಂಗ್ ಪಿನ್ ಆರ್ ಡಿ ಪಾಟೀಲ್ ಪತ್ತೆ ಹಚ್ಚಲು ಉತ್ತರ ಪ್ರದೇಶ ಕ್ಕೆ ಮತ್ತೊಂದು ಪೊಲೀಸ್ ತಂಡ ಕಳುಹಿಸಲಾಗಿದೆ. ಈ ಬಗ್ಗೆ ಉತ್ತರ ಪ್ರದೇಶದಲ್ಲಿ ಇದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರನ್ನು ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Previous articleಬರವಿದ್ದರೂ ಕೇಂದ್ರದಿಂದ ನೆರವು ಸಿಕ್ಕಿಲ್ಲ
Next articleಮಾಜಿ ಸಚಿವ ಡಿ.ಬಿ.ಚಂದ್ರೇಗೌಡ ಇನ್ನಿಲ್ಲ