ಶ್ರೀರಂಗಪಟ್ಟಣ: ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದ ಖೋಖೋ ಪಂದ್ಯಾವಳಿಯಲ್ಲಿ ಶ್ರೀರಂಗಪಟ್ಟಣದ ನ್ಯೂ ಆಕ್ಸ್ ಫರ್ಡ್ ಶಾಲೆಯ ಬಾಲಕ – ಬಾಲಕಿಯರ ತಂಡ ಪ್ತಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.
ಸೆಮಿಫೈನಲ್ ಪಂದ್ಯದಲ್ಲಿ ಗಾಮನಹಳ್ಳಿ ಬಾಲಕರ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದ ನ್ಯೂ ಆಕ್ಸ್ ಫರ್ಡ್ ಬಾಲಕರ ತಂಡ, ಫೈನಲ್ ನಲ್ಲಿ ಕೆ.ಶೆಟ್ಟಹಳ್ಳಿ ಬಾಲಕರ ತಂಡವನ್ನು ಮಣಿಸಿ ಪ್ರಥಮ ಸ್ಥಾನ ಪಡೆಯಿತು. ಹಾಗೆಯೇ ಸೆಮಿಫೈನಲ್ ನಲ್ಲಿ ಗಾಮನಹಳ್ಳಿ ಶಾಲಾ ಬಾಲಕಿಯರ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದ ನ್ಯೂ ಆಕ್ಸ್ ಫರ್ಡ್ ಶಾಲೆಯ ಬಾಲಕಿಯರ ತಂಡ, ಫೈನಲ್ ನಲ್ಲಿ ಬಿದರಳ್ಳಿ ಶಾಲೆಯ ಬಾಲಕಿಯರ ತಂಡವನ್ನು ಸುಲಭವಾಗಿ ಸೋಲಿಸಿ ಪ್ರಥಮ ಸ್ಥಾನ ಪಡೆದುಕೊಂಡರು. ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡ ಬಾಲಕ – ಬಾಲಕಿಯರ ತಂಡವನ್ನು ಶಾಲೆಯ ಆಡಳಿತ ಮಂಡಳಿ ಅಭಿನಂದಿಸಿದ್ದಾರೆ. ವಿಜೇತ ಆಟಗಾರರಿಗೆ ಮೆಡಲ್ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಕ್ರೀಡಾಕೂಟದಲ್ಲಿ ವಿವಿಧ ಶಾಲೆಗಳ ದೈಹಿಕ ಶಿಕ್ಷಕರು ಹಾಗೂ ಆಯೋಜಕರು ಉಪಸ್ಥಿತರಿದ್ದರು.