ಕೆಟ್ಟು ನಿಂತ ಯುದ್ಧನೌಕೆ

0
30

ಲಂಡನ್: ಬ್ರಿಟನ್ನಿನ ಅತಿದೊಡ್ಡ ವಿಮಾನವಾಹಕ ಯುದ್ಧನೌಕೆೆ ಎಚ್‌ಎಂಎಸ್ ಪ್ರಿನ್ಸ್ ಆಪ್ ವೇಲ್ಸ್ ಈಗ ಇಂಗ್ಲೆಂಡಿನ ದಕ್ಷಿಣ ಕರಾವಳಿ ತೀರದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಕೆಟ್ಟು ನಿಂತಿದೆ. ಇದು ಪೋರ್ಟ್ಸ್ ಮೌತ್ ನೌಕಾನೆಲೆಯಿಂದ ಅಮೆರಿಕ ಕಡೆಗೆ ತೆರಳಲಾರಂಭಿಸುತ್ತಿಂತೆಯೇ ಅದರ ಯಂತ್ರ ವ್ಯವಸ್ಥೆಯಲ್ಲಿ ತೊಂದರೆ ಕಾಣಿಸಿಕೊಂಡಿತು. ಸ್ಟಾರ್‌ಬೋರ್ಡ್ ಪ್ರೊಪೆಲ್ಲರ್ ಶಾಫ್ಟ್ಗೆ ಹಾನಿಯಾಗಿರಬಹುದೆಂದು ಅನಧಿಕೃತ ವರದಿ ತಿಳಿಸಿದೆ. ಕಳೆದ ವರ್ಷವಿಡೀ ಕಾರ್ಯಾಚರಣೆಯಲ್ಲಿ ತೊಡಗಿ ೩ ಶತಕೋಟಿ ಪೌಂಡ್(ಸುಮಾರು ೨.೮೧ ಲಕ್ಷ ಕೋಟಿ ರೂ.) ಮೌಲ್ಯದ ಈ ಯುದ್ಧ ನೌಕೆ ಈಗ ಐಲ್ ಆಫ್ ವಿಟ್‌ನ ಆಗ್ನೇಯ ಭಾಗದಲ್ಲಿ ಲಂಗರು ಹಾಕಿದೆ.

Previous articleಷೇರುಪೇಟೆಯಲ್ಲಿ ಕರಡಿ ಕುಣಿತ ಸೂಚ್ಯಂಕ ಕುಸಿತ
Next articleದೀಪಾವಳಿಗೆ ಜಿಯೊ 5ಜಿ