RCB ತಂಡದ ಮುಖ್ಯ ಕೋಚ್ ಆಗಿ ಆ್ಯಂಡಿ ಫ್ಲವರ್

0
13

ಬೆಂಗಳೂರು: ಆರ್‌ಸಿಬಿ ತಂಡ 17ನೇ ಆವೃತ್ತಿಯ ಐಪಿಎಲ್​ಗೂ ಮುನ್ನವೇ ಭರ್ಜರಿ ತಯಾರಿ ಆರಂಭಿಸಿವೆ. ಆರ್​ಸಿಬಿ ಬೆಂಗಳೂರು ಫ್ರಾಂಚೈಸಿಗೆ ಹೊಸ ಕೋಚ್ ಒಬ್ಬರು ಆಯ್ಕೆ ಆಗಿದ್ದಾರೆ. ವಿಶ್ವಕಪ್ ಸೇರಿ 7 ಪ್ರಶಸ್ತಿ ಗೆದ್ದಿರುವ ಅನುಭವ ಹೊಂದಿರುವ ಜಿಂಬಾಬ್ವೆಯ ಮಾಜಿ ಆಟಗಾರ ಆ್ಯಂಡಿ ಫ್ಲವರ್ ಆರ್​ಸಿಬಿ ತಂಡದ ಕೋಚ್​ ಆಗಿ ನೇಮಕಗೊಂಡಿದ್ದಾರೆ. ಈ ವಿಷಯವನ್ನು ಆರ್‌ಸಿಬಿ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದೆ. ತಂಡದ ಕ್ರಿಕೆಟ್ ಕಾರ್ಯಾಚರಣೆಯ ನಿರ್ದೇಶಕ ಮೈಕ್ ಹೆಸನ್ ಅವರ ಫ್ರಾಂಚೈಸಿ ಜೊತೆಗಿನ ಅಧಿಕಾರದ ಅವಧಿಯು ಆಗಸ್ಟ್ 31ಕ್ಕೆ ಮುಕ್ತಾಯಗೊಳ್ಳುತ್ತದೆ.

Previous articleಛತ್ತೀಸಗಡದತ್ತ ಅಭಯ ಚಿತ್ತ
Next articleಕರ್ನಾಟಕ ವಿಶ್ವವಿದ್ಯಾಲಯಕ್ಕೆ ಅನುದಾನ ಆಗ್ರಹಿಸಿ ರಸ್ತೆ ತಡೆ