ಅಯ್ಯರ್‌ಗೆ ನಾಯಕತ್ವದ ಪಟ್ಟ: ಅಚ್ಚರಿಯ ಆಯ್ಕೆ!

0
35

ಬೆನ್ನಿನ ನೋವಿನ ಕಾರಣದಿಂದಾಗಿ ಮುಂದಿನ ಆರು ತಿಂಗಳು ರೆಡ್ ಬಾಲ್ ಕ್ರಿಕೆಟ್‌ಗೆ ತಮ್ಮನ್ನು ಪರಿಗಣಿಸದಂತೆ ಅಯ್ಯರ್ ಇತ್ತೀಚೆಗೆ ಟೀಂ ಇಂಡಿಯಾ ಆಯ್ಕೆ ಸಮಿತಿಗೆ ಮನವಿ ಮಾಡಿದ್ದರು. ಈ ಮನವಿ ಮಾಡಿದ ಬೆನ್ನಲ್ಲೇ ಅವರಿಗೆ ನಾಯಕತ್ವ ನೀಡಿದ್ದು, ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

ಸೆಪ್ಟೆಂಬರ್ 30 ರಿಂದ ಆಸ್ಟ್ರೇಲಿಯಾ ಎ ತಂಡದ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ಎ ತಂಡವನ್ನು ಪ್ರಕಟಿಸಲಾಗಿದೆ. ಈ ಸರಣಿಯ ನಾಯಕತ್ವದ ಜವಾಬ್ದಾರಿಯನ್ನು ಶ್ರೇಯಸ್ ಅಯ್ಯರ್ ಹೆಗಲಿಗೆ ಹಾಕಲಾಗಿದೆ. ಆದರೆ, ಈ ಆಯ್ಕೆ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಭಾರತ ಎ ತಂಡದಲ್ಲಿ ಅಯ್ಯರ್ ಜೊತೆಗೆ ಯುವ ಪ್ರತಿಭೆಗಳಾದ ರವಿ ಬಿಷ್ಟೋಯ್, ವಿಕೆಟ್ ಕೀಪರ್-ಬ್ಯಾಟರ್ ಪ್ರಬ್‌ಸಿಮ್ರಾನ್ ಸಿಂಗ್, ಆಲ್‌ರೌಂಡರ್‌ಗಳಾದ ರಿಯಾನ್ ಪರಾಗ್ ಮತ್ತು ಆಯುಷ್ ಬಡೋನಿ ಕೂಡ ಸ್ಥಾನ ಪಡೆದಿದ್ದಾರೆ.

ಪ್ರಸ್ತುತ ಏಷ್ಯಾಕಪ್ ತಂಡದಲ್ಲಿರುವ ಹರ್ಷಿತ್ ರಾಣಾ ಮತ್ತು ಅರ್ಶ್‌ದೀಪ್ ಸಿಂಗ್ ಅವರು ಎರಡನೇ ಮತ್ತು ಮೂರನೇ ಏಕದಿನ ಪಂದ್ಯಗಳಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಇದು ಅವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಉತ್ತಮ ಅವಕಾಶ ನೀಡುತ್ತದೆ.

ಇರಾನಿ ಕಪ್‌ಗೆ ಪಾಟಿದಾರ್ ನಾಯಕತ್ವ: ಇದೇ ವೇಳೆ, ಅಕ್ಟೋಬರ್ 1 ರಿಂದ ನಾಗಪುರದಲ್ಲಿ ವಿದರ್ಭ ವಿರುದ್ಧ ನಡೆಯಲಿರುವ ಪ್ರತಿಷ್ಠಿತ ಇರಾನಿ ಕಪ್ ಪಂದ್ಯಕ್ಕೆ ರೆಸ್ಟ್ ಆಫ್ ಇಂಡಿಯಾ ತಂಡವನ್ನು ಪ್ರಕಟಿಸಲಾಗಿದ್ದು, ರಜತ್ ಪಾಟಿದಾರ್ ಅವರನ್ನು ನಾಯಕರನ್ನಾಗಿ ನೇಮಿಸಲಾಗಿದೆ. ಪಾಟಿದಾರ್ ಇತ್ತೀಚೆಗೆ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ನಾಯಕನಾಗಿ ಅವರ ಪಾತ್ರ ನಿರ್ಣಾಯಕವಾಗುವ ನಿರೀಕ್ಷೆಯಿದೆ.

ತಂಡಗಳ ವಿವರ: ಮೊದಲ ಏಕದಿನ ಪಂದ್ಯಕ್ಕೆ ಭಾರತ ಎ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಪ್ರಭ್ ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ರಿಯಾನ್ ಪರಾಗ್, ಆಯುಷ್ ಬಡೋನಿ, ಸೂರ್ಯಾಂಶ್ ಶೆಡ್ಡೆ, ವಿಪ್ರಜ್ ನಿಗಮ್, ನಿಶಾಂತ್ ಸಿಂಧು, ಗುರ್ಜಪ್ ನೀತ್ ಸಿಂಗ್, ಯುಶ್ ಸಿಂಗ್, ರವಿ ಬಿಷ್ಟೋಯ್, ಅಭಿಷೇಕ್ ಪೊರೆಲ್, ಪ್ರಿಯಾಂಶ್ ಆರ್ಯ, ಸಿಮ್‌ಆರ್‌ಜೆತ್ ಸಿಂಗ್.

ಎರಡನೇ ಮತ್ತು ಮೂರನೇ ಏಕದಿನ ಪಂದ್ಯಗಳಿಗೆ ಭಾರತ ಎ ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪ ನಾಯಕ), ಅಭಿಷೇಕ್ ಶರ್ಮಾ, ಪ್ರಬ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ರಿಯಾನ್ ಪರಾಗ್, ಆಯುಷ್ ಬಡೋನಿ, ಸೂರ್ಯಾಂಶ್ ಶೆಡ್ಡೆ, ವಿಪ್ರಜ್ ನಿಗಮ್, ನಿಶಾಂತ್ ಸಿಂಧು, ಗುರ್ಜಪ್‌ನೀತ್ ಸಿಂಗ್, ಯುದ್‌ವೀರ್ ಸಿಂಗ್, ರವಿ ಬಿಷ್ಟೋಯ್, ಅಭಿಷೇಕ್ ಪೋರೆಲ್, ಹರ್ಷಿತ್ ರಾಣಾ, ಆರ್ಷದೀಪ್ ಸಿಂಗ್.

ರೆಸ್ಟ್ ಆಫ್ ಇಂಡಿಯಾ (ಇರಾನಿ ಕಪ್): ರಜತ್ ಪಾಟಿದಾರ್ (ನಾಯಕ), ಅಭಿಮನ್ಯು ಈಶ್ವರನ್, ಆರ್ಯನ್ ಜುಯಲ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್‌ವಾಡ್ (ಉಪ ನಾಯಕ), ಯಶ್ ಧುಲ್, ಶೇಖ್ ರಶೀದ್, ಇಶಾನ್ ಕಿಶನ್ (ವಿಕೆಟ್ ಕೀಪರ್), ತನುಷ್ ಕೋಟ್ಯಾನ್, ಮಾನವ್ ಸುತಾರ್, ಗುರ್‌ನೂ‌ರ್ ಬ್ರಾರ್‌, ಖಲೀಲ್‌ ಅಹಮದ್‌, ಆಕಾಶ್ ದೀಪ್, ಅನ್‌ಶುಲ್ ಕಂಬೋಜ್, ಸರಾಂಶ್‌ ಜೈನ್‌

ಈ ಸರಣಿಗಳು ಮತ್ತು ಪಂದ್ಯಾವಳಿಗಳು ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಮತ್ತು ರಾಷ್ಟ್ರೀಯ ತಂಡಕ್ಕೆ ಬಾಗಿಲು ತಟ್ಟಲು ಉತ್ತಮ ವೇದಿಕೆಯಾಗಲಿವೆ.

Previous articleಬಿಹಾರ ಚುನಾವಣೆಯಲ್ಲಿ ಬಿಜೆಪಿ ಪ್ರತಿಷ್ಠೆ: ಉಸ್ತುವಾರಿಗಳ ನೇಮಕ
Next articleವೈದ್ಯ ಸೀಟಿಗೆ ನಕಲಿ ದಾಖಲೆ ಸೃಷ್ಟಿ: 21 ಮೆಡಿಕಲ್‌ ವಿದ್ಯಾರ್ಥಿಗಳಿಗೆ ನಕಲಿ ಪ್ರಮಾಣ ಪತ್ರ!

LEAVE A REPLY

Please enter your comment!
Please enter your name here