Home ಕ್ರೀಡೆ ನಿಶ್ಚಿತಾರ್ಥದ ಉಂಗುರ ‘ಮಿಸ್ಸಿಂಗ್’: ಸ್ಮೃತಿ-ಪಲಾಶ್ ಮುಚ್ಚಲ್ ಮದುವೆ ರದ್ದಾಗಿದ್ದು ಖಚಿತವೇ? ಅಭಿಮಾನಿಗಳಲ್ಲಿ ಆತಂಕ!

ನಿಶ್ಚಿತಾರ್ಥದ ಉಂಗುರ ‘ಮಿಸ್ಸಿಂಗ್’: ಸ್ಮೃತಿ-ಪಲಾಶ್ ಮುಚ್ಚಲ್ ಮದುವೆ ರದ್ದಾಗಿದ್ದು ಖಚಿತವೇ? ಅಭಿಮಾನಿಗಳಲ್ಲಿ ಆತಂಕ!

1
ನಿಶ್ಚಿತಾರ್ಥದ ಉಂಗುರ ‘ಮಿಸ್ಸಿಂಗ್’: ಸ್ಮೃತಿ-ಪಲಾಶ್ ಮುಚ್ಚಲ್ ಮದುವೆ ರದ್ದಾಗಿದ್ದು ಖಚಿತವೇ? ಅಭಿಮಾನಿಗಳಲ್ಲಿ ಆತಂಕ!

ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಉಪನಾಯಕಿ ಸ್ಮೃತಿ ಮಂಧಾನಾ ಮತ್ತು ಖ್ಯಾತ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ವಿವಾಹದ ಕುರಿತು ಅಭಿಮಾನಿಗಳಲ್ಲಿ ತೀವ್ರ ಗೊಂದಲ ಮತ್ತು ಆತಂಕ ಮನೆ ಮಾಡಿದೆ. ಅಲ್ಲದೆ, ಈ ವಿಚಾರ ಇದೀಗ ಮತ್ತೂಂದು ಹೂಸ ಚರ್ಚೆಗೆ ದಾರಿ ಮಾಡಿದೆ.

ನವೆಂಬರ್ 23 ರಂದು ನಡೆಯಬೇಕಿದ್ದ ಮದುವೆ ಕೊನೆಯ ಕ್ಷಣದಲ್ಲಿ ಸ್ಥಗಿತಗೊಂಡ ನಂತರ, ಇದೀಗ ಸ್ಮೃತಿ ಕೈನಿಂದ ನಿಶ್ಚಿತಾರ್ಥದ ಉಂಗುರ (Engagement Ring) ಮಾಯವಾಗಿರುವುದು ಈ ಜೋಡಿಯ ಸಂಬಂಧ ಮುರಿದುಬಿದ್ದಿದೆ ಎಂಬ ಊಹಾಪೋಹಗಳಿಗೆ ಗುರಿಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್: ವಿವಾಹ ಸ್ಥಗಿತಗೊಂಡ ನಂತರ ಇದೇ ಮೊದಲ ಬಾರಿಗೆ ಸ್ಮೃತಿ ಮಂಧಾನಾ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದಾರೆ.

ಹಾಗೇ ಬಿಡುಗಡೆ ಮಾಡಿದ ವಿಡಿಯೋ ಒಂದರಲ್ಲಿ, ಸ್ಮೃತಿ ಬೆರಳಿನಲ್ಲಿ ಸಾಮಾನ್ಯವಾಗಿ ಕಾಣುತ್ತಿದ್ದ ನಿಶ್ಚಿತಾರ್ಥದ ಉಂಗುರ ಇಲ್ಲದಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಕ್ರಿಕೆಟ್ ಮತ್ತು ಮನರಂಜನಾ ವಲಯದ ಈ ಇಬ್ಬರು ಸೆಲೆಬ್ರಿಟಿಗಳ ನಡುವಿನ ಸಂಬಂಧದ ಬಗ್ಗೆ ಇದರಿಂದಾಗಿ ಅಭಿಮಾನಿಗಳು ಬಹಿರಂಗವಾಗಿ ಚರ್ಚೆಗಿಳಿದಿದ್ದಾರೆ.

ಮದುವೆ ಮುಂದೂಡಿಕೆಗೆ ಕಾರಣವೇನು?: ಪಲಾಶ್ ಮುಚ್ಚಲ್ ಮತ್ತು ಸ್ಮೃತಿ ಮಂಧಾನಾ ವಿವಾಹವು ನವೆಂಬರ್ 23 ರಂದು ಅದ್ಧೂರಿಯಾಗಿ ನಡೆಯಲು ಸಿದ್ಧವಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಮದುವೆ ನಿಂತಿತ್ತು.

ಆರೋಗ್ಯ ಸಮಸ್ಯೆ: ಆರಂಭದಲ್ಲಿ, ಮಹಿಳಾ ವಿಶ್ವಕಪ್ ವಿಜೇತ ತಂಡದ ಆಟಗಾರ್ತಿಯಾದ ಸ್ಮೃತಿ ತಂದೆ ಶ್ರೀನಿವಾಸ್ ತೀವ್ರ ಅನಾರೋಗ್ಯಕ್ಕೆ ಒಳಗಾದ ಕಾರಣ ವಿವಾಹವನ್ನು ಸ್ಥಗಿತಗೊಳಿಸಗಾಗಿತ್ತು.

ಪಲಾಶ್ ಆಸ್ಪತ್ರೆಗೆ: ಅಚ್ಚರಿ ಎಂಬಂತೆ, ವಿವಾಹದ ಮರುದಿನವೇ (ನವೆಂಬರ್ 24) ವರ ಪಲಾಶ್ ಮುಚ್ಚಲ್ ಸಹ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗುತಿತ್ತು.

ಹಾಗೇ ಪತಿ-ಪತ್ನಿ ಆಗಬೇಕಿದ್ದವರು ಒಂದೇ ಸಮಯದಲ್ಲಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ, ಇಬ್ಬರೂ ಡಿಸ್ಚಾರ್ಜ್ ಆದ ನಂತರವೂ ವಿವಾಹದ ಹೊಸ ದಿನಾಂಕವನ್ನು ಕುಟುಂಬಗಳು ಇದುವರೆಗೆ ಪ್ರಕಟಿಸದಿರುವುದು ಹಲವಾರು ಊಹಾಪೋಹ ಮತ್ತು ಅನುಮಾನಗಳಿಗೆ ಕಾರಣವಾಗಿದೆ.

ಜಾಹೀರಾತು ಮತ್ತು ಅಧಿಕೃತ ಸ್ಪಷ್ಟತೆಯ ಕೊರತೆ: ಇನ್‌ಸ್ಟಾಗ್ರಾಮ್‌ನಲ್ಲಿ ಸ್ಮೃತಿ ಪ್ರಕಟಿಸಿದ ಇತ್ತೀಚಿನ ಪೋಸ್ಟ್‌ನಲ್ಲಿ, ಬೆರಳಿನಲ್ಲಿದ್ದ ನಿಶ್ಚಿತಾರ್ಥದ ಉಂಗುರ ಇಲ್ಲದಿರುವುದನ್ನು ಖಚಿತಪಡಿಸಿದ್ದಾರೆ.

ಹೀಗಾಗಿ ಈ ವಿಡಿಯೋವನ್ನು ಹರಿಬಿಟ್ಟ ಕಾರಣ ಅಭಿಮಾನಿಗಳಿಗೆ ಮದುವೆ ಆಗಿತ್ತೆದೆ ಅಥವಾ ಇಲ್ಲವೂ..? ಎಂಬ ಪ್ರಶ್ನೆಗಳು ಜಾಲತಾಣಗಳಲ್ಲಿ ಸದ್ದು ಮಾಡುತಿವೆ.

ಆದರೆ ಈ ಮದುವೆಯ ವಿಚಾರವಾಗಿ ಪಲಾಶ್ ಮತ್ತು ಸ್ಮೃತಿ ಮಂಧಾನಾ ಕುಟುಂಬಗಳಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲಾ. ಹೀಗಾಗಿ ಬರುವವರೆಗೂ ಈ ವದಂತಿಗಳು ಮತ್ತು ಊಹಾಪೋಹಗಳು ಮುಂದುವರಿಯಲಿವೆ ಎನ್ನಲಾಗುತ್ತಿದೆ.

1 COMMENT

LEAVE A REPLY

Please enter your comment!
Please enter your name here