ನವದೆಹಲಿ: 2030ರ ಕಾಮನ್‌ವೆಲ್ತ್ ಕ್ರೀಡಾಕೂಟದ ಆತಿಥ್ಯ ವಹಿಸಲು ಭಾರತ ಬಿಡ್ ಸಲ್ಲಿಸುವುದಕ್ಕೆ ಭಾರತೀಯ ಒಲಿಂಪಿಕ್ ಸಂಸ್ಥೆಯು (ಐಒಎ) ವಿಶೇಷ ಸಾಮಾನ್ಯ ಸಭೆಯಲ್ಲಿ ಬುಧವಾರ ಅನುಮೋದನೆ ನೀಡಿದೆ. ವಿಶೇಷ ಮಹಾಸಭೆಯಲ್ಲಿ ಭಾರತೀಯ ಒಲಿಂಪಿಕ್ ಅಸೋಸಿಯೇಷನ್, ಕಾಮನ್‌ವೆಲ್ತ್ ಕ್ರೀಡಾಕೂಟದ ಬಿಡ್ ಅನ್ನು ಔಪಚಾರಿಕ ಅನುಮೋದನೆ ನೀಡಿದೆ.
ಕಾಮನ್‌ವೆಲ್ತ್ ಕ್ರೀಡಾಕೂಟದ ಬಿಡ್ ಮಾಡಿರುವುದು ಒಲಿಂಪಿಕ್ಸ್ ಪೂರ್ವಸಿದ್ಧತೆ ಮಾಡಲು ಎಂದು ಅಂದಾಜಿಸಲಾಗಿದೆ. ದಾಖಲೆಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 31 ಅಂತಿಮ ಗಡುವಿನೊಳಗೆ ಭಾರತ ತನ್ನ ಅಂತಿಮ ಬಿಡ್ ಅನ್ನು ಸಲ್ಲಿಸಬೇಕು. 2010ರಲ್ಲಿ ಕೊನೆಯ ಬಾರಿ ಭಾರತವು ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ದೆಹಲಿಯಲ್ಲಿ ಆತಿಥ್ಯ ವಹಿಸಿತ್ತು.
ಕೆನಡಾದ ಹಿಂದೆ ಸರಿದಿದ್ದು ಭಾರತದ ಪ್ಲಸ್: 2030 ರ ಕ್ರೀಡಾಕೂಟವನ್ನು ಆಯೋಜಿಸುವ ಸ್ಪರ್ಧೆಯಿಂದ ಕೆನಡಾ ಹಿಂದೆ ಸರಿದ ನಂತರ ಭಾರತದ ಬಿಡ್ ಗೆಲ್ಲುವ ನಿರೀಕ್ಷೆಯನ್ನು ಹೆಚ್ಚಿಸಿದೆ. ಅಹಮದಾಬಾದ್‌ನಲ್ಲಿ ಕಾರ್ಯಕ್ರಮ ಆಯೋಜಿಸುವ ಸಾಧ್ಯತೆ ಹೆಚ್ಚಿದೆ.
2030 ರ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಲು ಭಾರತ ಈಗಾಗಲೇ ತನ್ನ ಆಸಕ್ತಿಯ ತಿಳಿಸಿದ್ದು, ಅಹಮದಾಬಾದ್ ಅನ್ನು ಆತಿಥೇಯ ನಗರವಾಗಿ ಪ್ರಸ್ತಾಪಿಸಿದೆ. ನಿಯೋಗದಲ್ಲಿ ಐಒಎ ಮುಖ್ಯಸ್ಥೆ ಪಿಟಿ ಉಷಾ ಮತ್ತು ಕೇಂದ್ರ ಕ್ರೀಡಾ ಸಚಿವಾಲಯ ಹಾಗೂ ಗುಜರಾತ್ ರಾಜ್ಯ ಸರ್ಕಾರದ ಅಧಿಕಾರಿಗಳು ಇದ್ದರು.
ಇತ್ತೀಚೆಗೆ, ಕಾಮನ್‌ವೆಲ್ತ್ ಸ್ಪೋರ್ಟ್ಸ್‌ನ ಅಧಿಕಾರಿಗಳ ತಂಡವು, ಅದರ ಕ್ರೀಡಾಕೂಟದ ನಿರ್ದೇಶಕ ಡ್ಯಾರೆನ್ ಹಾಲ್ ನೇತೃತ್ವದಲ್ಲಿ, ಸ್ಥಳಗಳನ್ನು ಪರಿಶೀಲಿಸಲು ಮತ್ತು ಗುಜರಾತ್ ಸರ್ಕಾರದ ಅಧಿಕಾರಿಗಳನ್ನು ಭೇಟಿ ಮಾಡಲು ಅಹಮದಾಬಾದ್‌ಗೆ ಭೇಟಿ ನೀಡಿತ್ತು. ಕಾಮನ್‌ವೆಲ್ತ್ ದೊಡ್ಡ ನಿಯೋಗವು ಈ ತಿಂಗಳ ಕೊನೆಯಲ್ಲಿ ಅಹಮದಾಬಾದ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ.
ಮತದಾನ ಪ್ರಕ್ರಿಯೆ: ಐಒಎ ಸಂವಿಧಾನದ 10.1 ನೇ ವಿಧಿಯ ಪ್ರಕಾರ, ಹಲವಾರು ವರ್ಗದ ಸದಸ್ಯರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಇವರಲ್ಲಿ ಪ್ರತಿ ರಾಷ್ಟ್ರೀಯ ಕ್ರೀಡಾ ಒಕ್ಕೂಟದಿಂದ (ಎನ್ಎಸ್ಎಫ್) ಇಬ್ಬರು ಪ್ರತಿನಿಧಿಗಳು ಸೇರಿದ್ದಾರೆ. ಅವರಲ್ಲಿ ಒಬ್ಬರು ಮಹಿಳೆ ಇರುತ್ತಾರೆ. ಅತ್ಯುತ್ತಮ ಅರ್ಹತೆಯ ಎಂಟು ಕ್ರೀಡಾಪಟುಗಳು ಸಹ ಮತ ಚಲಾಯಿಸಲು ಅರ್ಹರಾಗಿದ್ದಾರೆ.
ನವೆಂಬರ್ ಅಂತ್ಯದಲ್ಲಿ ಫಲಿತಾಂಶ: ಕೆನಡಾ ಬಿಡ್ಡಿಂಗ್ ಪ್ರಕ್ರಿಯೆಯಿಂದ ಹಿಂದೆ ಸರಿದ ನಂತರ, ಆತಿಥೇಯ ಹಕ್ಕುಗಳನ್ನು ಪಡೆಯುವ ಭಾರತದ ನಿರೀಕ್ಷೆಗಳು ಮತ್ತಷ್ಟು ಚೇತರಿಸಿಕೊಂಡಿದೆ. 2030 ರ ಕಾಮನ್‌ವೆಲ್ತ್ ಕ್ರೀಡಾಕೂಟದ ಆತಿಥ್ಯದ ಕುರಿತು ನವೆಂಬರ್ ಕೊನೆಯ ವಾರದಲ್ಲಿ ಗ್ಲ್ಯಾಸ್ಗೋದಲ್ಲಿ ಸಭೆ ಸೇರಲಿರುವ ಕಾಮನ್‌ವೆಲ್ತ್ ಕ್ರೀಡಾ ಮಹಾಸಭೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ.
ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ ಲೋಕಸಭೆಯಲ್ಲಿ ಮಾತ್ರವಲ್ಲದೆ ರಾಜ್ಯಸಭೆಯಲ್ಲೂ ಪಾಸಾಗಿದೆ. ರಾಷ್ಟ್ರೀಯ ಉದ್ದೀಪನ ನಿಗ್ರಹ (ತಿದ್ದುಪಡಿ) ಮಸೂದೆ ಸಹ ಪಾಸಾಗಿದ್ದು, ಎರಡೂ ಮಸೂದೆಗಳು ರಾಷ್ಟ್ರಪತಿಗಳಿಂದ ಅಂಗೀಕಾರಗೊಳ್ಳುವುದು ಬಾಕಿ ಇದೆ. ಈ ಎಲ್ಲ ಬೆಳವಣಿಗೆ ನೋಡುವಾಗ ಕಾಮನ್‌ವೆಲ್ತ್ ಮತ್ತು ಒಲಿಂಪಿಕ್ ಭಾರತದಲ್ಲಿ ನಡೆಯುವುದು ಖಚಿತ ಆದಂತಾಗಿದೆ.