Home ಸಿನಿ ಮಿಲ್ಸ್ ಕನ್ನಡ ರ‍್ಯಾಪ್‌ ಹಾಡಿನಲ್ಲಿ ಚಂದನ್ ಶೆಟ್ಟಿ ಜೊತೆ ಕ್ರಿಸ್‌ ಗೇಲ್‌‌

ಕನ್ನಡ ರ‍್ಯಾಪ್‌ ಹಾಡಿನಲ್ಲಿ ಚಂದನ್ ಶೆಟ್ಟಿ ಜೊತೆ ಕ್ರಿಸ್‌ ಗೇಲ್‌‌

0

ಬೆಂಗಳೂರು: “ಹಾಳಾಗೋದೇ” ಎನ್ನುತ್ತಲೇ ಕನ್ನಡ ಸಂಗೀತ ಪ್ರಿಯರನ್ನು ರ‍್ಯಾಪ್‌ ಸಂಗೀತಲೋಕದಲ್ಲಿ ತೇಲಿಸಿದ್ದ ಚಂದನ ಶೆಟ್ಟಿ, ಈಗ ಮತ್ತೊಂದು ಕನ್ನಡದ ರ‍್ಯಾಪ್‌ ಹಾಡಿನ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಜ್ಜಾಗಿದ್ದಾರೆ.

ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದವರ ಪಟ್ಟಿಯಲ್ಲಿ ನಂ. 1 ಸ್ಥಾನ ಪಡೆದಿರುವ ʻಯೂನಿವರ್ಸಲ್ ಬಾಸ್’ ಎಂದೇ ಕರೆಸಿಕೊಳ್ಳುವ ಕ್ರಿಸ್ ಗೇಲ್ ಈ ಹಾಡಿಗೆ ಸಾಥ್‌ ನೀಡಿದ್ದಾರೆ.

ರಾಕ್‌ಸ್ಟಾರ ಚಂದನ ಶೆಟ್ಟಿ ಹಾಗೂ ʻಯೂನಿವರ್ಸಲ್ ಬಾಸ್’ ಕ್ರಿಸ್ ಗೇಲ್ ಇವರ ಈ ಕೊಲಾಬರೇಷನ್‌ ಹಾಡಿನ ಬಗ್ಗೆ ಸ್ವತಃ ಕ್ರಿಸ್‌ಗೇಲ್‌ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ. ಈ ದೃಶ್ಯದಲ್ಲಿ ಚಂದನ್‌ ಶೆಟ್ಟಿ ಸಹ ಮಾತನಾಡಿ ಖಚಿತಪಡಿಸಿದ್ದಾರೆ.

ಇನ್ನು ಈ ಕುರಿತಂತೆ ಕ್ರಿಸ್‌ಗೇಲ್‌ ಕೂಡ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ʼನಾನು ಯೂನಿವರ್ಸಲ್‌ ಬಾಸ್‌. ಇದೀಗ ನನ್ನ ರಾಕ್‌ಸ್ಟಾರ್‌ ಸ್ನೇಹಿತ ಚಂದನ್‌ ಶೆಟ್ಟಿ ಅವರ ಜೊತೆ ಸೇರಿ ಸುಂದರವಾದ ಒಂದು ಪ್ರಾಜೆಕ್ಟ್‌ ಮಾಡುತ್ತಿದ್ದೇನೆ. ಭಾರತದ ನಮ್ಮ ಬೆಂಗಳೂರಿನ ಗೆಳೆಯ ರಾಕ್‌ಸ್ಟಾರ್‌ ಜೊತೆ ಸುಂದರವಾದ ಅದ್ಭುತ ಹಾಡನ್ನು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಇದೇ ವಿಡಿಯೋದಲ್ಲಿ ಮಾತನಾಡಿದ ಚಂದನ್‌ ಶೆಟ್ಟಿ ʼಲೈಫ್‌ ಆಫ್‌ ಕ್ಯಾಸಿನೋʼ ಎಂಬ ವಿಡಿಯೋ ಸಾಂಗ್‌ ನಾವು ಮಾಡುತ್ತಿದ್ದೇವೆ. ಕ್ರಿಸ್‌ ಗೇಲ್‌ ಅವರ ಜೊತೆಗೆ ಇದನ್ನ ಮಾಡುತ್ತಿರುವುದಕ್ಕೆ ತುಂಬ ಎಕ್ಸೈಟ್‌ ಆಗಿದ್ದೇನೆ. ಕೊಲಾಬರೇಷನ್‌ ಬಗ್ಗೆ ಖುಷಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಈ ಹಾಡಿನ ಬಗ್ಗೆ ಇನ್ನಷ್ಟು ಮಾಹಿತಿ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಚಂದನ್‌ಶೆಟ್ಟಿ ಮತ್ತು ಕ್ರಿಸ್‌ ಗೇಲ್‌ ಸಮಾಗಮ ಕನ್ನಡ ಸಂಗೀತಕ್ಕೆ ಒಂದು ಅಂತಾರಾಷ್ಟ್ರೀಯ ಆಯಾಮವನ್ನು ತಂದಂತಾಗಿದೆ. ಕನ್ನಡದ ರ‍್ಯಾಪ್‌ ಹಾಡುಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಈ ಪ್ರಯತ್ನವು, ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.

ಕ್ರಿಸ್ ಗೇಲ್ ಆರ್​ಸಿಬಿಯ ಮೂಲಕ ಬೆಂಗಳೂರು ಮತ್ತು ಕನ್ನಡಿಗರ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದಾರೆ. ಹಲವು ವರ್ಷಗಳ ಕಾಲ ಆರ್​ಸಿಬಿ ಪರ ಆಡಿದ್ದ ಗೇಲ್‌ ಅನೇಕ ಬಾರಿ ಬೆಂಗಳೂರಿಗೆ ಬಂದು ಹೋಗಿದ್ದಾರೆ. ಅವರಿಗೆ ಬೆಂಗಳೂರು ನೆಚ್ಚಿನ ತಾಣವಾಗಿದೆ, ಇದನ್ನು ಸ್ವತಃ ಗೇಲ್‌ ಹಲವಾರು ಬಾರಿ ಹೇಳಿಕೊಂಡಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ʻಸೂತ್ರಧಾರಿ’ ಮೂಲಕ ನಾಯಕನಾಗಿ ಕಾಲಿಟ್ಟ ಚಂದನ್ ಶೆಟ್ಟಿ ಚಿತ್ರ ಇತ್ತೀಚೆಗೆ ತೆರೆ ಕಂಡಿತ್ತು. ಈಗ ʻಲೈಫ್‌ ಈಸ್‌ ಕೆಸಿನೋʼ ಹಾಡಿನ ಮೂಲಕ ಬಹು ನೀರಿಕ್ಷೆಯನ್ನು ಹುಟ್ಟು ಹಾಕಿದ್ದಾರೆ. ಈ ಹಾಡಿನ ರಿಲೀಸ್‌ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಮೊದಲ ಸಲ ಕನ್ನಡ, ಇಂಗ್ಲಿಷ್‌ನಲ್ಲಿ ನಾವಿಬ್ಬರು ಹಾಡು ಹೇಳಿ, ಕುಣಿದಿದ್ದೇವೆ. ಇಂಗ್ಲಿಷ್ ಹಾಡನ್ನು ಗೇಲ್ ಹಾಡಿದ್ದಾರೆ. ಅವರು ಕನ್ನಡದ ಒಂದು ಸಾಲನ್ನೂ ಹಾಡುತ್ತಾರೆ ಎಂದು ಚಂದನ್‌ ಶೆಟ್ಟಿ ಹೇಳಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version