ಪ್ಯಾರಾ ಏಷ್ಯನ್​ ಗೇಮ್ಸ್​: ಪದಕ ಗಳಿಕೆಯಲ್ಲಿ ಭಾರತ ಶತಕ

0
15

ಏಷ್ಯನ್​ ಪ್ಯಾರಾ ಗೇಮ್ಸ್​ನಲ್ಲಿ ಭಾರತ 100 ಪದಕಗಳನ್ನು ಗೆಲ್ಲುವ ಮೂಲಕ ಪ್ಯಾರಾ ಅಥ್ಲೀಟ್ಸ್​ಗಳು ಹೊಸ ದಾಖಲೆ ಬರೆದಿದೆ. ಕ್ರೀಡಾಕೂಟದಲ್ಲಿ ಭಾರತ 25 ಚಿನ್ನ, 30 ಬೆಳ್ಳಿ ಮತ್ತು 45 ಕಂಚಿನ ಪದಕ ಗೆಲ್ಲುವ ಮೂಲಕ 100 ಪದಕಗಳನ್ನು ತನ್ನದಾಗಿಸಿಕೊಂಡಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾರಾ ಅಥ್ಲೀಟ್​ಗಳಿಗೆ ಶುಭಕೋರಿ ಪೋಸ್ಟ್‌ ಹಾಕಿದ್ದಾರೆ. ಪ್ಯಾರಾ ಏಷ್ಯನ್ ಗೇಮ್ಸ್​ನಲ್ಲಿ ಭಾರತಕ್ಕೆ 100 ಪದಕಗಳ ಗರಿ! ಇದು ಅಪೂರ್ವ ಆನಂದದ ಕ್ಷಣವಾಗಿದೆ. ಈ ಯಶಸ್ಸು ನಮ್ಮ ಕ್ರೀಡಾಪಟುಗಳ ಪ್ರತಿಭೆ, ಕಠಿಣ ಪರಿಶ್ರಮ ಮತ್ತು ದೃಢ ನಿರ್ಧಾರದ ಫಲವಾಗಿದೆ. ಈ ಗಮನಾರ್ಹ ಸಾಧನೆ ಮಾಡಿದ ಕ್ರೀಡಾಪಟುಗಳು, ತರಬೇತುದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಭಾರತದ ಯುವಕರಿಗೆ ಅಸಾಧ್ಯವಾದದು ಯಾವುದೂ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಈ ಸಾಧನೆ ನಮಗೆಲ್ಲರಿಗೂ ಸ್ಫೂರ್ತಿದಾಯಕ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

Previous articleಯುದ್ಧೋನ್ಮಾದ ತರವಲ್ಲ ಸಾವು ನೋವು ಕೊನೆಯಾಗಲಿ
Next articleತ್ರಿಬಲ್ ರೈಡ್ ಚಾಲನೆ ತಡೆಗೆ ವಿಶೇಷ ಅಭಿಯಾನ