Home ಕ್ರೀಡೆ ತಂದೆಯಾದ ಬುಮ್ರಾ: ಏಷ್ಯಾಕಪ್‌ನ ಪಂದ್ಯಗಳಿಗೆ ಅಲಭ್ಯ

ತಂದೆಯಾದ ಬುಮ್ರಾ: ಏಷ್ಯಾಕಪ್‌ನ ಪಂದ್ಯಗಳಿಗೆ ಅಲಭ್ಯ

0

ಮುಂಬೈ: ಟೀಂ ಇಂಡಿಯಾ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಹಾಗೂ ಸಂಜನಾ ಗಣೇಶನ್ ದಂಪತಿ ಇದೀಗ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ಜಸ್‌ಪ್ರೀತ್ ಬುಮ್ರಾ ಅವರು ತಂದೆಯಾದ ಸಂಭ್ರದಲ್ಲಿದ್ದಾರೆ. ಪತ್ನಿ ಸಂಜನಾ ಗಣೇಶನ್ ಅವರು ಭಾನುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಂದೆಯಾದ ಈ ವಿಚಾರವನ್ನು ಬುಮ್ರಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಏಷ್ಯಾಕಪ್‌ನಲ್ಲಿ ಆಡುತ್ತಿದ್ದ ಬುಮ್ರಾ ಮೊದಲ ಮಗುವಿನ ನಿರೀಕ್ಷೆಯಲ್ಲಿ ನೇಪಾಳ ವಿರುದ್ಧ ಸೋಮವಾರ ನಡೆಯಬೇಕಿದ್ದ ಪಂದ್ಯಕ್ಕೆ ಒಂದು ದಿನ ಮುನ್ನ ಟೂರ್ನಿಯನ್ನು ಮೊಟಕುಗೊಳಿಸಿ ದೇಶಕ್ಕೆ ವಾಪಸ್ ಆಗಿದ್ದಾರೆ.

Exit mobile version