ವಿಶ್ವಕಪ್ ಕ್ರಿಕೆಟ್: ಹೆಚ್ಚುವರಿ ಟಿಕೆಟ್ ಮಾರಾಟ

0
15

ನವದೆಹಲಿ: ಇನ್ನೇನು ಕೆಲವೇ ದಿನಗಳಲ್ಲಿ ಅಂದರೆ ಅಕ್ಟೋಬರ್ ೫ರಿಂದ ಆರಂಭವಾಗಲಿರುವ ಐಸಿಸಿ ವಿಶ್ವಕಪ್ ಪಂದ್ಯಗಳ ಟಿಕೆಟ್‌ಗೆ ಈಗ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಿದೆ. ಹೆಚ್ಚಿನ ಬೇಡಿಕೆಯನ್ನು ಪೂರೈಸಲು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ನಾಲ್ಕು ಲಕ್ಷ ಹೆಚ್ಚುವರಿ ಟಿಕೆಟ್‌ಗಳನ್ನು ಮಾರಾಟ ಮಾಡುವುದಾಗಿ ಬುಧವಾರ ಪ್ರಕಟಿಸಿದೆ. ಎರಡನೇ ಹಂತದಲ್ಲಿ ಸೆಪ್ಟೆಂಬರ್ ೮ ರಂದು ಬೆಳಿಗ್ಗೆ ೮ ಗಂಟೆಯಿಂದ ಟಿಕೆಟ್‌ಗಳು ಮಾರಾಟವಾಗಲಿದೆ ಎಂದು ಬಿಸಿಸಿಐ ಹೇಳಿದೆ. ಮೊದಲ ಹಂತದ ಮಾರಾಟ ಆಗಸ್ಟ್ ೨೫ರಿಂದ ಸೆಪ್ಟೆಂಬರ್ ೩ ರವರೆಗೆ ನಡೆದಿದ್ದು, ಆತಿಥೇಯ ಭಾರತ ಒಳಗೊಂಡ ಪಂದ್ಯಗಳು ಸೇರಿದಂತೆ ವಿಶ್ವಕಪ್ ಪಂದ್ಯಗಳ ಟಿಕೆಟ್ ಭರ್ಜರಿಯಾಗಿ ಮಾರಾಟ ಕಂಡಿದ್ದವು.

Previous articleಮೈಸೂರು ಕಾಗದ ಕಾರ್ಖಾನೆ ಪುನಾರಂಭ
Next articleಚೀನಾ ಓಪನ್: ಸೋಲು ಕಂಡ ರಾಂಕಿರೆಡ್ಡಿ-ಚಿರಾಗ್ ಜೋಡಿ