ಮುಂಬೈ: ಟೀಂ ಇಂಡಿಯಾದ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಐಸಿಸಿ ಬಿಡುಗಡೆ ಮಾಡಿದ ರ‍್ಯಾಂಕಿಂಗ್ ಪಟ್ಟಿಯಲ್ಲಿ ೩ನೇ ಸ್ಥಾನಕ್ಕೇರಿದ್ದಾರೆ. ಪಾಕಿಸ್ತಾನದ ಬಾಬರ್ ಅಜಮ್ ಏಕದಿನ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ನಂ.೧ ಸ್ಥಾನದಲ್ಲಿದ್ದಾರೆ.
ಇತ್ತೀಚೆಗೆ ಕೊಲಂಬೊದಲ್ಲಿ ನಡೆದ ಏಷ್ಯಾ ಕಪ್‌ನ ೫ನೇ ಪಂದ್ಯದಲ್ಲಿ ನೇಪಾಳ ವಿರುದ್ಧ ಗಿಲ್ ಅವರ ಅದ್ಭುತ ಶತಕದ ನಂತರ ಅವರು ೬೨ ಎಸೆತಗಳಲ್ಲಿ ಅಜೇಯ ೬೭ ರನ್ ಗಳಿಸಿದರು. ಇದರಿಂದಾಗಿ ಭಾರತ ತಂಡಕ್ಕೆ ೧೦ ವಿಕೆಟ್‌ಗಳ ಸುಲಭ ಗೆಲುವಿಗೆ ಕಾರಣವಾಯಿತು. ಇಶಾನ್ ಕಿಶನ್ ಪಾಕಿಸ್ತಾನ ವಿರುದ್ಧದ ೩ನೇ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ರ‍್ಯಾಂಕಿಂಗ್‌ನಲ್ಲಿ ಅಗ್ರ ೨೫ರೊಳಗೆ ಪ್ರವೇಶಿಸಿದರು. ೮೧ ಎಸೆತಗಳಲ್ಲಿ ೮೨ ರನ್ ಗಳಿಸಿದ ಕಿಶನ್ ೨೪ನೇ ಸ್ಥಾನಕ್ಕೆ ಏರಿದ್ದಾರೆ. ವಿರಾಟ್ ಕೊಹ್ಲಿ ೧೦ ಹಾಗೂ ರೋಹಿತ್ ಶರ್ಮಾ ೧೧ನೇ ಸ್ಥಾನ ಗಳಿಸಿದ್ದಾರೆ.