೨೮ ಸಾವಿರ ಜನರಿಂದ ಅಮರನಾಥನ ದರ್ಶನ

0
10

ಶ್ರೀನಗರ: ಹಿಮಾಲಯದ ತಪ್ಪಲಲ್ಲಿರುವ ದಕ್ಷಿಣ ಕಾಶ್ಮೀರದ ಗುಹಾದೇವಾಲಯವಾದ ಅಮರನಾಥ ಸನ್ನಿಧಿಗೆ ಭಾನುವಾರ ೧೫ ಸಾವಿರ ಭಕ್ತರು ಭೇಟಿ ನೀಡಿದ್ದಾರೆ. ಈ ಯಾತ್ರೆ ಆರಂಭವಾದಂದಿನಿಂದ ಕಳೆದೆರಡು ದಿನಗಳಲ್ಲಿ ಹಿಮಲಿಂಗದ ದರ್ಶನ ಮಾಡಿದವರ ಸಂಖ್ಯೆ ೨೮ ಸಾವಿರ ದಾಟಿದೆ. ಈ ಯಾತ್ರೆಯಲ್ಲಿ ಸಾವಿರಕ್ಕೂ ಅಧಿಕ ಭದ್ರತಾ ಸಿಬ್ಬಂದಿ, ೮೩ ಮಕ್ಕಳು ಹಾಗೂ ಇಬ್ಬರು ತೃತೀಯ ಲಿಂಗಿಗಳೂ ಸೇರಿದ್ದಾರೆ. ಶನಿವಾರ ಆರಂಭವಾಗಿರುವ ೫೨ ದಿನಗಳ ಅಮರನಾಥ ಯಾತ್ರೆ ಆಗಸ್ಟ್ ೧೯ಕ್ಕೆ ಅಂತ್ಯಗೊಳ್ಳಲಿದೆ. ಕಳೆದ ವರ್ಷ ೪.೫ ಲಕ್ಷ ಯಾತ್ರಿಕರು ಅಮರನಾಥನ ದರ್ಶನ ಮಾಡಿದ್ದರು.

Previous articleವಿಐಎಸ್‌ಎಲ್ ಕಾರ್ಖಾನೆ ಉಳಿಸಲು ಬದ್ಧ: ಎಚ್ಡಿಕೆ
Next articleಜಾರ್ಖಂಡ್‌ನಲ್ಲೂ ನಿರ್ಮಾಣ ಹಂತದ ಸೇತುವೆ ಕುಸಿತ