ಹೀರೋ ಮೋಟೋಕಾರ್ಪ್ ಅಧ್ಯಕ್ಷರ ಮನೆ ಮೇಲೆ ಇ.ಡಿ ದಾಳಿ

0
19

ನವದೆಹಲಿ: ವಿಶ್ವದ ಅತಿದೊಡ್ಡ ದ್ವಿಚಕ್ರ ಉತ್ಪಾದನಾ ಕಂಪನಿ ಹೀರೋ ಮೋಟೋಕಾರ್ಪ್ ಅಧ್ಯಕ್ಷ ಪವನ್ ಮುಂಜಾಲ್ ಮನೆಗೆ ಜಾರಿ ನಿರ್ದೇಶನಾಲಯವು ದಾಳಿ ನಡೆಸಿದೆ. ಪವನ್ ಮುಂಜಾಲ್ ಮತ್ತು ಇತರ ಕೆಲವರ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ದಿಲ್ಲಿ ಮತ್ತು ನೆರೆಯ ಗುರುಗ್ರಾಮ್‌ನ ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಅಘೋಷಿತ ವಿದೇಶಿ ಕರೆನ್ಸಿಯನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಮುಂಜಾಲ್‌ ನಿಕಟವರ್ತಿಯೊಬ್ಬರ ವಿರುದ್ಧ ವಿರುದ್ಧ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ತನಿಖೆ ನಡೆಸುತ್ತಿದ್ದು, ಡಿಆರ್‌ಐ ದೂರಿನ ಮೇರೆಗೆ ಈ ದಾಳಿ ನಡೆದಿದೆ.

Previous articleಕಾಂಗ್ರೆಸ್ ‌ಸರ್ಕಾರದ ದುಬಾರಿ ದುನಿಯಾ ಸೃಷ್ಟಿ
Next articleರಾಕಸಕೊಪ್ಪ ಜಲಾಶಯಕ್ಕೆ ಭಾಗಿನ ಅರ್ಪಣೆ