ಸಿಎಂ ಆಗಿ ನಾನು ಫೇಲ್ ಆಗಿದ್ದೇನೆ

0
34

ಜಮ್ಮು: ಜಮ್ಮು-ಕಾಶ್ಮೀರದ ಪ್ರವಾಸೋದ್ಯಮ ಖಾತೆಯ ಸಚಿವನಾಗಿ ಪ್ರವಾಸಿಗರ ಸುರಕ್ಷತೆ ಖಾತ್ರಿಪಡಿಸುವಲ್ಲಿ ನಾನೇ ವಿಫಲನಾಗಿ ದ್ದೇನೆ ಎಂದು ಖುದ್ದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ವಿಧಾನಸಭೆ ಯಲ್ಲಿ ಏಪ್ರಿಲ್ ೨೨ರ ಪಹಲ್ಗಾಮ್ ದಾಳಿ ಯನ್ನು ಉಲ್ಲೇಖಿಸಿ ಹೇಳಿಕೊಂಡಿದ್ದಾರೆ. ನಾವು ಹಿಂದೆಯೂ ಇಂತಹ ಹಲವಾರು ದಾಳಿಗಳನ್ನು ನೋಡಿದ್ದೇವೆ. ಆದರೆ ಬೈಸರನ್‌ನಲ್ಲಿ ನಡೆದ ದಾಳಿಯಲ್ಲಿ ಬಲಿಯಾದವರ ಕುಟುಂಬಗಳಿಗೆ ಕ್ಷಮೆಯಾಚಿಸಲು ನನ್ನಲ್ಲಿ ಪದಗಳೇ ಇಲ್ಲ. ತಂದೆಯನ್ನು ಕಳೆದುಕೊಂಡ ಮಕ್ಕಳಿಗೆ, ಮದುವೆಯಾದ ಕೆಲವೇ ದಿನಗಳಲ್ಲಿ ಗಂಡ ನನ್ನು ಕಳೆದುಕೊಂಡವರಿಗೆ ನಾನೇನು ಹೇಳಲಿ? ರಜಾದಿನಗಳನ್ನು ಕಳೆಯಲೆಂದು ಬಂದವರು ಮಾಡಿದ ತಪ್ಪೇನು?'' ಎಂದರು.ಈ ದಾಳಿಯನ್ನು ನಮಗಾಗಿ ಮಾಡಿರುವುದಾಗಿ ಹೇಳುತ್ತಾರೆ.

Previous articleಸರ್ಕಾರಿ ಶಾಲೆ ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್ ಕ್ಲಾಸ್
Next articleಮತ್ತೆ 64,000 ಕೋಟಿಗೆ ರಫೇಲ್ ವಿಮಾನ ಖರೀದಿ