ಸವಾಲು ಸ್ವೀಕಾರ ಮಾಡುತ್ತೇನೆ, ಪಲಾಯನವಾದ ಮಾಡುವುದಿಲ್ಲ

0
11

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನನ್ನ ಮೇಲೆ ಸವಾಲು ಹಾಕಿದ್ದು ಅದನ್ನು ನಾನು ಸ್ವೀಕಾರ ಮಾಡುತ್ತೇನೆ. ನಾನು ಪಲಾಯನವಾದ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀವು ಅಧಿಕಾರಗಳ ವರ್ಗಾವಣೆಯಲ್ಲಿ ದುಡ್ಡು ತೆಗೆದುಕೊಂಡಿಲ್ವಾ? ಧರ್ಮಸ್ಥಳಕ್ಕೆ ಬಂದು ಆಣೆ ಮಾಡುತ್ತೀರಾ ಎಂದು ಸವಾಲು ಹಾಕಿದ್ದೀರಿ ಅಲ್ವಾ? ನಾನು ಡಿ.ಕೆ. ಶಿವಕುಮಾರ್ ಸವಾಲು ಸ್ವೀಕರಿಸುತ್ತೇನೆ. ಯಾವುದೇ ದೇವಸ್ಥಾನಕ್ಕೆ ನಾನು ಬರುವುದಕ್ಕೆ ಸಿದ್ಧನಿದ್ದೇನೆ. ನಿಮ್ಮ ಸಿಎಂ, ಡಿಸಿಎಂ ಮತ್ತು ಮಂತ್ರಿಗಳು ದೇವಸ್ಥಾನಕ್ಕೆ ಬನ್ನಿ, ವರ್ಗಾವಣೆ ಹಣ ತಗೆದುಕೊಂಡಿಲ್ಲ ಎಂದು ಪ್ರಮಾಣ ಮಾಡಿ, ನಾನು ಕೂಡ ಪ್ರಮಾಣ ಮಾಡ್ತೀನಿ. ನಾನು ಯಾವುದೇ ಅಧಿಕಾರಿ ಹತ್ತಿರ ವರ್ಗಾವಣೆಗಾಗಿ ದುಡ್ಡು ತೆಗೆದುಕೊಂಡಿಲ್ಲ. ನೀವು ಈ 5 ತಿಂಗಳಲ್ಲಿ ವರ್ಗಾವಣೆಗಾಗಿ ಹಣ ತಗೆದುಕೊಂಡಿಲ್ಲ ಅಂತ ಪ್ರಮಾಣ ಮಾಡಿ ಎಂದು ಸವಾಲು ಹಾಕಿದರು.

Previous articleಬಹಿರಂಗ ಚರ್ಚೆಗೆ ಸಮಯ ನಿಗದಿಪಡಿಸಿ
Next articleಧರ್ಮಸ್ಥಳದಲ್ಲಿ ನಾನು ಆಣೆ ಮಾಡಿದರೆ ಯಾರು ನಂಬುತ್ತಾರೆ?