ಸದೃಢ ತರುಣರೇ ಭಾರತ ಸಂಪತ್ತು

0
9

ನಮ್ಮ ದೇಶ ಭಾರತ. ಭಾರತ ಎಂದರೆ ಅದು ಕೇವಲ ಭೂಮಿ ಅಲ್ಲ; ಅದು ಎಲ್ಲ ದೃಷ್ಟಿಯಿಂದ ಬೆಳಕು ತೋರುವ ಆತ್ಮ.
ಕೆಲವರು ತಿಳಿದುಕೊಂಡಂತೆ ಖನಿಜ್ ಸಂಪತ್ತು, ನೀರು ಇವ್ಯಾವವೂ ಭಾರತ ಅಲ್ಲ; ಆದರೆ ಭಾರತ ಎಂದರೆ ಈ ದೇಶದ ಬೆಳೆಯುವ ಮಕ್ಕಳು ಮತ್ತು ತರುಣರು ಎಂದೇ ಹೇಳಬೇಕು. ತರುಣರೇ ನಿಜವಾದ ಸಂಪತ್ತು. ಅವರ ಅಭಿಲಾಷೆಗಳು ಇತ್ತೀಚೆಗೆ ಬದಲಾಗುತ್ತಲಿವೆ. ಯಾವ ವಯಸ್ಸಿನಲ್ಲಿ ಏನು ಮಾಡಬೇಕು ಎಂಬುದನ್ನೇ ಮರೆಯತೊಡಗುತ್ತಿದ್ದಾರೆ. ಯುವತಿಯರ ದುರ್ವ್ಯಸನಕ್ಕೆ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಲಿದ್ದಾರೆ. ದುಶ್ಚಟಗಳಿಗೆ ಬಲಿಯಾಗಿ ಪೂರ್ಣ ಆಯುಸ್ಸು ಅನುಭವಿಸದೇ ಅರ್ಧಾಯುಷ್ಯಕ್ಕೆ ಸತ್ತು ಹೋಗುತ್ತಿದ್ದಾರೆ.
ಬಸವಣ್ಣನವರು `ಶರೀರಕ್ಕೆ ಪ್ರಸಾದ ಕಾಯ’ ಎಂದು ಬಣ್ಣಿಸಿದ್ದಾರೆ. ಕೂಡಲಸಂಗ ವರಿಸಲು ಬಂದ ಪ್ರಸಾದ ಕಾಯವ ಕೆಡಿಸಿದಿರಯ್ಯಾ ‘ ಹೀಗಾಗಿ ನಮ್ಮ ದೇಹದ ಕಸದ ಬುಟ್ಟಿ ಅಲ್ಲ; ಪ್ರಸಾದಮಯವಾದ ಶರೀರಕ್ಕೆ ಯಾವದು ಯೋಗ್ಯವೋ ಅದರಿಂದ ಪೋಷಣೆ ಮಾಡಬೇಕು. ಹಿರಿಯರಾಗಿ ನಾವೇ ನಮ್ಮ ಚಟಗನ್ನು ನೀಗಿಸುವ ಸಲುವಾಗಿ ಮಕ್ಕಳಿಂದ ಬೀಡಿ ಸಿಗರೇಟು ತಂಬಾಕು. ಮದ್ಯದಂತಹ ವ್ಯಸನಿಕ ವಸ್ತುಗಳನ್ನು ಅವರಿಂದ ತರಿಸಬಾರದು. ಮತ್ತು ಅವರೆದುರು ವ್ಯಸನವನ್ನು ಪ್ರದರ್ಶಿಸಬಾರದು. ಹಾಗೊಂದು ವೇಳೆ ಮಾಡಿದರೆ, ಮಕ್ಕಳು ಕೂಡ ಅನುಕರಿಸಿಯೇ ಬಿಡುತ್ತಾರೆ. ನಂತರ ಅದೇ ಚಟವಾಗಿ ಬಿಡುತ್ತದೆ. ಚಟಗಳಿಗೆ ಬಲಿಯಾಗದಂತೆ ಮಕ್ಕಳನ್ನು ಬೆಳೆಸುವದು ಹೆತ್ತವರ ಆದ್ಯ ಕರ್ತವ್ಯ.
ದುಶ್ಚಟಗಳಿಂದ ಮನೆ ಮಠ ಅಷ್ಟೇ ಅಲ್ಲ; ಆರೋಗ್ಯ, ಮಾನ ಮರ್ಯಾದೆ ಹಾಳಾಗಿ ಹೋಗುತ್ತದೆ. ಬದುಕು ರೂಪಿಸುವ ಸಮಾಜದ ನಮ್ಮದಾಗಬೇಕಿದೆ. ಸಮಾಜದ ಸ್ವಾಸ್ಥ್ಯ ಚನ್ನಾಗಿದ್ದರೆ. ತರುಣರು ಮತ್ತು ಮಕ್ಕಳು ಸಮಾಜದಲ್ಲಿ ಚನ್ನಾಗಿ
ಬೆಳೆಯುತ್ತಾರೆ.
ಅಂಥ ಸದೃಢ ಸಮಾಜ ನಿರ್ಮಾಣ ಮಾಡಬೇಕಾದಲ್ಲಿ ತರುಣರು ಭಾರತದ ಶಕ್ತಿಯಾಗಿ ಮಿಂಚಬೇಕು. ಸದೃಢ ಆರೋಗ್ಯದಲ್ಲಿ ಸದೃಢವಾದ ಅಗಾಧ ಶಕ್ತಿ ಸಂಚಯವಿದೆ. ಅದರಿಂದ ಬೇಕಾದ ಸತ್ಕೃತಿಯನ್ನು ಮಾಡಬಹುದು.

Previous articleಶಾಲಾ ಬ್ಯಾಗ್ ರಹಿತದಿನ ಮಕ್ಕಳಿಗೆ ಸಂತಸದ ಕ್ಷಣ
Next article‘ಕರ್ನಾಟಕ ಮಾದರಿ’ಯ ಆಡಳಿತವನ್ನು ನೀಡುವ ಪ್ರಯತ್ನ