ಬಾಗಲಕೋಟೆ: ವಿಜಯಪುರದಿಂದ ಬೆಳಗಾವಿಗೆ ಹೊರಟಿದ್ದ ಸಂಸದ ರಮೇಶ ಜಿಗಜಿಣಗಿ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಾಗಲಕೋಟೆ ಬವಿವ ಸಂಘದ ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಾಹನದಲ್ಲಿ ದಿಢೀರ್ ಉಸಿರಾಟ ತೊಂದರೆ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆತಂದಾಗ ಲಘು ಹೃದಾಯಾಘಾತವಾಗಿರುವುದು ಕಂಡು ಬಂದಿದೆ.
ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು HSK ಆಸ್ಪತ್ರೆಯಲ್ಲಿದ್ದು, ಜಿಗಜಿಣಗಿ ಅವರ ಚಿಕಿತ್ಸೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಸಂಸದರ ಎದೆಯ ಒಂದು ರಂಧ್ರದಲ್ಲಿ ನೀರು ತುಂಬಿರುವುದರಿಂದ ಸಮಸ್ಯೆ ಆಗಿದೆ ಎನ್ನಲಾಗಿದ್ದು ಹಿರಿಯ ತಜ್ಞಾ ಡಾ. ಸುಭಾಸ್ ಪಾಟೀಲ, ಡಾ. ಸಮೀರ್ ಕುಮಾರ್ ಅವರು ಇಕೋ ಪ್ರಕ್ರಿಯೆ ನಡೆಸಿ ಚಿಕಿತ್ಸೆ ನೀಡುತ್ತಿದ್ದಾರೆ ಜಿಗಜಿಣಗಿ ಅವರ ಆಪ್ತರ ಮಾಹಿತಿ ಪ್ರಕಾರ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.