ಶುಕ್ರವಾರವೇ ಪಟ್ಟಿ ಬಿಡುಗಡೆ

0
14
ಕುಮಾರಸ್ವಾಮಿ

ಕಲಬುರಗಿ: ಶುಕ್ರವಾರ ಬೆಳಗ್ಗೆ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು. ಇಂದು ಕಲಬುರಗಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬಹಳ ಜನ ಜನತಾ ಪರಿವಾರದಿಂದ ಬೇರೆ ಬೇರೆ ಪಕ್ಷಕ್ಕೆ ಹೊದವರಿದ್ದಾರೆ ಅವರೆಲ್ಲರೂ ವಾಪಸ್ ಬರೋದಕ್ಕೆ ಚರ್ಚೆ ಆಗಿದೆ ಅದರಲ್ಲು ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಇಲ್ಲ ಅಂತಾ ಹೇಳುತ್ತಿದ್ದರು, ಆದರೆ ಈಗ ಉತ್ತರ ಕರ್ನಾಟಕದಲ್ಲಿ 30 ರಿಂದ 40 ಜನ ಗೆಲ್ಲುವ ವಾತಾವರಣ ನಿರ್ಮಾಣ ಆಗಿದೆ ವೈಎಸ್​ವಿ ದತ್ತಾ ಅವರು ನನ್ನ ಜೊತೆ ಸಂಪರ್ಕದಲ್ಲಿಲ್ಲ. ದತ್ತಾ ಶಾಸಕರಾಗಿದ್ದಾಗಲೂ ನನ್ನ ಜೊತೆ ಸಂಪರ್ಕದಲ್ಲಿರಲಿಲ್ಲ. ರೇವಣ್ಣ ಮತ್ತು ಪ್ರಜ್ವಲ್ ಅಂತಹ ದೊಡ್ಡವರ ಜೊತೆ ಸಂಪರ್ಕದಲ್ಲಿರೋದು ಎಂದು ಲೇವಡಿ ಮಾಡಿದರು. ನಾವು ಈ ಬಾರಿ 120 ಕ್ರಾಸ್ ಮಾಡಲೇಬೇಕು ಎಂದು ಕಾರ್ಯಕರ್ತರಿಗೆ ಕರೆಕೊಟ್ಟರು.

Previous articleಬಿಎಸ್ವೈ ಮೊಬೈಲ್‌ ಸ್ವಿಚ್‌ ಆಫ್‌ ಆದ್ರೆ 50 ಸೀಟು ಬರಲ್ಲ
Next articleನಿರಾಣಿ ನಾಮಪತ್ರ ಸಲ್ಲಿಕೆ: ಆಸ್ತಿ, ಸಾಲ ಎರಡರಲ್ಲೂ ಪತ್ನಿಯೇ ಮುಂದು..!