ಲಿಂಗಾಯತ ಪ್ರತ್ಯೇಕ ಧರ್ಮದ ಮಾತೇ ಇಲ್ಲ

0
13
ಶಾಮನೂರು ಶಿವಶಂಕರಪ್ಪ

ದಾವಣಗೆರೆ: ಲಿಂಗಾಯತ ಪ್ರತ್ಯೇಕ ಧರ್ಮದ ಮಾತೇ ಇಲ್ಲ. ಎಲ್ಲಾರೂ ಒಟ್ಟಾಗಿ ಇರ್ತಿವಿ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೀರಶೈವ ಲಿಂಗಾಯತರನ್ನು ಒಬಿಸಿ ಸೇರ್ಪಡೆ ವಿಚಾರ‌ವಾಗಿ ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಒಳ ಪಂಗಡಗಳು ಸೇರಿ ಒಬಿಸಿಗೆ ಒತ್ತಾಯ ಮಾಡಿದ್ದೇವೆ. ಪ್ರತ್ಯೇಕ ಧರ್ಮದ ಮಾತೇ ಇಲ್ಲ ಎಂದು ತಿಳಿಸಿದರು.
ಇನ್ನು ಬಿ.ಕೆ.ಹರಿಪ್ರಸಾದ್ ಹೇಳಿಕೆ ಬಗ್ಗೆ ನನಗೆ ಏನು ಗೊತ್ತಿಲ್ಲ. ಗೊತ್ತಿಲ್ಲದೆ ಬೇರೆ ಏನು ಮಾತಾಡೋದಿಲ್ಲ. ಇದು ಹೈಕಮಾಂಡ್‌ಗೆ ಬಿಟ್ಟ ವಿಚಾರ, ನಾನು ಮೀಟ್ ಮಾಡಿದಾಗ ಹೇಳುತ್ತೇನೆ ಎಂದು ಜಾರಿಕೊಂಡರು.

Previous articleʻಹೆಬ್ಬುಲಿʼ ಕಟಿಂಗ್ ಬೇಡ: ಕಟಿಂಗ್ ಅಂಗಡಿ ಮಾಲೀಕರಿಗೆ ಶಿಕ್ಷಕ ಪತ್ರ
Next articleವಿಮಾನ ನಿಲ್ದಾಣ ಜಲಾವೃತ: ಪ್ರಯಾಣಿಕರ ಪರದಾಟ