ಯಲ್ಲಾಪುರ ಬಳಿ ಲಾರಿ ಪಲ್ಟಿ: ಸವಣೂರಿನ ತರಕಾರಿ ವ್ಯಾಪಾರಿಗಳ ಸಾವು

0
23

ಹಾವೇರಿ : ಸವಣೂರಿನಿಂದ ತರಕಾರಿ ಮಾರಾಟಕ್ಕೆಂದು ಕುಮಟಾಗೆ ತೆರಳುತ್ತಿದ್ದ ಮಿನಿಲಾರಿ ಪಲ್ಟಿಯಾಗಿ 9 ಜನ ಮೃತಪಟ್ಟ ಘಟನೆ ಕಾರವಾರ ಜಿಲ್ಲೆಯ ಯಲ್ಲಾಪುರ ಬಳಿಯ ಅರಬೈಲ್ ಘಟ್ಟದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.

ಮೃತರನ್ನು ಫಯಾಜ್ ಇಮಾಮ್ ಸಾಬ್ ಜಮಖಂಡಿ (45), ವಾಸೀಮ್ ವಿರುಲ್ಲಾ ಮುಡಗೇರಿ (35), ಇಜಾಜ್ ಮುಸ್ತಕಾ ಮುಲ್ಲಾ (20), ಸಾದೀಕ್ ಭಾಷ್ ಫಾರಷ್ (30) ಗುಲಾಮ್ಉಷೇನ್ ಜವಳಿ (40) ಇಮ್ತಿಯಾಜ್ ಮಮಜಾಪರ್ ಮುಳಕೇರಿ (36) ಅಲ್ಪಾಜ್ ಜಾಫರ್ ಮಂಡಕ್ಕಿ (25) ಜೀಲಾನಿ ಅಬ್ದುಲ್ ಜಖಾತಿ (25), ಅಸ್ಲಂ ಬಾಬುಲಿ ಬೆಣ್ಣಿ (24) ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ಇನ್ನೂ 15ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಯಲ್ಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆ ವಾಹನದಲ್ಲಿದ್ದವರಲ್ಲಿ ಬಹುತೇಕ ಜನರು ಸವಣೂರಿನವರು ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಸಾಗುತ್ತಿದ್ದ ಲಾರಿ ಕಂದಕಕ್ಕೆ ಉರುಳಿದ ಪರಿಣಾಮ ತರಕಾರಿ ಚೀಲಗಳ ಮೇಲೆ ಕುಳಿತವರು ನಜ್ಜುಗುಜ್ಜಾಗಿದ್ದಾರೆ. ತೀವ್ರವಾಗಿ ಗಾಯಗೊಂಡವರನ್ನು ಹುಬ್ಬಳ್ಳಿ ಕಿಮ್ಸ್ ಗೆ ಸಾಗಿಸಲಾಗುತ್ತಿದೆ.

ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಯಲ್ಲಾಪುರ ಅರೆಬೈಲ್ ಘಾಟ್ ಬಳಿ ಭೀಕರ ಅಪಘಾತ: ಸಾವಿನ ಸಂಖ್ಯೆ 10ಕ್ಕೆ ಏರಿಕೆ
Next articleಬೆಳಗಾವಿ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಬಂದಿದ್ದ ಕಾರ್ಯಕರ್ತ ಹೃದಯಾಘಾತದಿಂದ ಸಾವು