ಮೂಡಿಗೆರೆಯಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿ

0
16
ಚಿಕ್ಕಮಗಳೂರು

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಹುಲ್ಲೆಮನೆ ಕುಂದೂರು ಗ್ರಾಮದಲ್ಲಿ ಕಾಡಾನೆ ದಾಳಿ ನಡೆಸಿದ್ದು, ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
ಕುಂದೂರು ಗ್ರಾಮದ ಶೋಭ( 45 ) ವರ್ಷದ ಎಂಬ ರೈತ ಮಹಿಳೆ ಕಾಡಾನೆ ದಾಳಿಗೆ ಬಲಿಯಾದ ದುರ್ದೈವಿ. ಅವರು ಭಾನುವಾರ ಬೆಳಗ್ಗಿನ ಜಾವ ಹುಲ್ಲು ಕುಯ್ಯಲು ತೆರಳಿದ್ದಾಗ ಕಾಡಾನೆ ದಾಳಿ ನಡೆಸಿದೆ.
ತನ್ನ ಪತಿಯ ಕಣ್ಣೆದುರೇ ಕಾಡಾನೆ ಪತ್ನಿಯನ್ನು ಸಾಯಿಸಿದೆ ಎಂದು ತಿಳಿದು ಬಂದಿದೆ, ಸಾರ್ವಜನಿಕರು ತಿರುಗಾಡುವ ರಸ್ತೆಯ ಸಮೀಪದಲ್ಲೇ ಕಾಡಾನೆ ದಾಳಿ ನಡೆಸಿದೆ ಎನ್ನಲಾಗಿದೆ. ಕೆಲ ತಿಂಗಳ ಹಿಂದೆ ಕೆಂಜಿಗೆ ಗ್ರಾಮದ ಆನಂದ ದೇವಾಡಿಗ ಎಂಬುವರನ್ನು ಇದೇ ಕಾಡಾನೆ ತುಳಿದು ಸಾಯಿಸಿದೆ ಎಂದು ಸ್ಥಳೀಯರಿಂದ ಮಾತು ಕೇಳಿ ಬರುತ್ತಿದೆ.

Previous articleಪರಿಶಿಷ್ಟ ಪಂಗಡಗಳ ನವಶಕ್ತಿ ಸಮಾವೇಶಕ್ಕೆ ಜನಸಾಗರ
Next articleಕ್ಷುಲಕ ಕಾರಣ: ಚಾಕುವಿನಿಂದ ಇರಿದು ಕೊಲೆ