ಮುಂದಿನ ಚುನಾವಣೆಯೊಳಗೆ ಸಿದ್ದು ಜೈಲಿಗೆ‌

0
33
ನಳಿನ್‌ಕುಮಾರ್ ಕಟೀಲ್

ಮಂಗಳೂರು: ಮುಂದಿನ ಚುನಾವಣೆಯೊಳಗೆ ಸಿದ್ದರಾಮಯ್ಯ ಜೈಲು ಸೇರಲಿದ್ದಾರೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದ್ದಾರೆ.
ದ.ಕ ಜಿಲ್ಲಾ ಬಿಜೆಪಿಯಿಂದ ಇಂದಿನಿಂದ ಜ. ೧೨ರ ತನಕ ನಡೆಯುವ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷವು ಕೆಂಪಣ್ಣ ಅವರನ್ನು ಬುಟ್ಟಿಗೆ ಹಾಕಿಕೊಂಡು ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ೪೦ ಪರ್ಸೆಂಟ್ ಕಮಿಷನ್ ಆರೋಪ ಮಾಡಿತು. ಆಧಾರರಹಿತ ಆರೋಪ ಮಾಡಿದ ಕೆಂಪಣ್ಣ ಜೈಲು ಸೇರಿದ್ದಾರೆ. ಜೈಲಿಗೆ ಹೋಗುವ ಮುಂದಿನ ಸರದಿ ಸಿದ್ದರಾಮಯ್ಯ ಅವರದ್ದು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಮಹಾಭ್ರಷ್ಟರು ಎಂದು ನಾನೂ ಆರೋಪ ಮಾಡುತ್ತೇನೆ. ಡಿ.ಕೆ.ಶಿ ಅವರು ಈಗಾಗಲೇ ಜೈಲಿಗೆ ಹೋಗಿದ್ದಾರೆ. ಸಿದ್ದರಾಮಯ್ಯ ಅವರೂ ಮುಂದಿನ ಚುನಾವಣೆ ಒಳಗೆ ಜೈಲಿಗೆ ಹೋಗಲಿದ್ದಾರೆ’ ಎಂದರು.

Previous articleಅಪಘಾತ: ಕಾಂಗ್ರೆಸ್‌ ಸಮಾವೇಶಕ್ಕೆ ಬಂದಿದ್ದ ವ್ಯಕ್ತಿ ಸಾವು
Next articleವಿದ್ಯುತ್ ಕಡಿತ: ರೈತರ ಆಕ್ರೋಶ