ಮಂತ್ರಾಲಯಕ್ಕೆ ಭೇಟಿ ನೀಡಿದ ಬ್ರಿಟನ್ ಪ್ರಧಾನಿಯ ಪೋಷಕರು

0
19

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಬುಧವಾರ. ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಪೋಷಕರಾದ ಯಶವೀರ್ ಸುನಕ್ ಮತ್ತು ಉಷಾ ಸುನಕ್ ಹಾಗೂ ಅವರೊಂದಿಗೆ ಇನ್ ಫೋಸಸ್ ನ ಮುಖ್ಯಸ್ಥರಾದ ಸುಧಾನಾರಾಯಣ ಮೂರ್ತಿಯವರು ಭೇಟಿ ನೀಡಿದ್ದರು. ಶ್ರೀ ಗುರುರಾಯರ ಮೂಲಬೃಂದಾನದ ದರ್ಶನ ಪಡೆದರು.
ನಂತರ ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಅವರನ್ನು ಭೇಟಿದ ಅವರಿಗೆ ಶ್ರೀಗಳವರು ವಸ್ತ್ರಂ, ಫಲ ಮಂತ್ರಾಕ್ಷತೆ ಮತ್ತು ಸ್ಮರಣಿಕೆ ನೀಡಿ ಆಶೀರ್ವಾದ ಮಾಡಿದರು. ಹೆಚ್ಚುವರಿಯಾಗಿ, ಪರಮಪೂಜ್ಯ ಶ್ರೀ ಸ್ವಾಮೀಜಿಯವರು ಶ್ರೀ ರಾಯರ ಪವಿತ್ರ ಪ್ರಸಾದವನ್ನು ಬ್ರಿಟನ್‌ನ ಪ್ರಧಾನ ಮಂತ್ರಿ ರಿಷಿ ಸುನಕ್ ಅವರಿಗೆ ಅವರ ಹೆತ್ತವರಿಗೆ ತಲುಪಿಸುವಂತೆ  ಒಪ್ಪಿಸಿದರು.

Previous articleನಿಫಾ ವೈರಸ್: ಕರ್ನಾಟಕದಲ್ಲೂ ಅಲರ್ಟ್
Next articleಕಾವೇರಿ ಜಲವಿವಾದ: ಕಾನೂನು ತಂಡದ ಜತೆ ಚರ್ಚಿಸಿ ತೀರ್ಮಾನ