ಭೂಗತ ಪಾತಕಿ ಬನ್ನಂಜೆ ರಾಜಾ ಆರೋಗ್ಯದಲ್ಲಿ ಏರುಪೇರು

0
7

ಬೆಳಗಾವಿ: ಕೈಗಾರಿಕೋದ್ಯಮಿ ನಾಯಕ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕುಖ್ಯಾತ ಭೂಗತ ಪಾತಕಿ ಬನ್ನಂಜೆ ರಾಜಾ ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ಗುರುವಾರ ಚಿಕಿತ್ಸೆಗಾಗಿ ಬೆಳಗಾವಿಯ ಬಿಮ್ಸ್‌ಗೆ ಕರೆತರಲಾಯಿತು.
ಜೈಲು ಆಸ್ಪತ್ರೆ ವೈದ್ಯರ ಸೂಚನೆಯಂತೆ ಬಿಗಿ ಬಂದೋಬಸ್ತ್‌ನಲ್ಲಿ ಗುರುವಾರ ಬಿಮ್ಸ್‌ಗೆ ಕರೆತಂದು ಇಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಸಿಟಿಸ್ಕ್ಯಾನ್ ನಡೆಸಿ ತಪಾಸಣೆ ಮಾಡಿದರು. ಬನ್ನಂಜೆ ರಾಜಾ ಭೂಗತ ಜಗತ್ತಿನೊಂದಿಗೆ ಸಂಪರ್ಕ ಹೊಂದಿರುವ ಕಾರಣಕ್ಕೆ ಆಸ್ಪತ್ರೆಗೆ ಕರೆತರುವಾಗ ಹಾಗೂ ಪುನಃ ಜೈಲಿಗೆ ಕರೆದೊಯ್ಯುವಾಗ ಸಶಸ್ತ್ರ ಪೊಲೀಸ್ ಭದ್ರತೆಯನ್ನು ಒದಗಿಸಲಾಯಿತು.
ಬಿಮ್ಸ್ ವೈದ್ಯರು ಆರೋಗ್ಯ ತಪಾಸಣೆಯ ರಿಪೋರ್ಟ್ ಬಂದ ಬಳಿಕ ಮುಂದಿನ ಚಿಕಿತ್ಸೆ ಮಾಡುವವರಿದ್ದಾರೆ. ಹಾಗಾಗಿ ಜೈಲಿಗೆ ಮರಳಿ ಕಳುಹಿಸಲಾಯಿತು.

Previous articleಪೊಕ್ಸೋ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು
Next articleಜೀವನ ಸೋಲು ಗೆಲುವಿನ ಆಟ