ಪ್ರಧಾನಿ ಜನ್ಮದಿನ ಹಿನ್ನೆಲೆ: ರಕ್ತದಾನ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ

0
41

ಧಾರವಾಡ /ಹುಬ್ಬಳ್ಳಿ: ವಿಧಾನ ಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಅನಾರೋಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಎರಡು ಬಾರಿ ಅವರನ್ನು ಸಂಪರ್ಕ ಮಾಡಲು ಪ್ರಯತ್ನ ಮಾಡಿದ್ದೇನೆ. ಅವರ ಮೊಬೈಲ್ ಆಫ್ ಇದೆ ಎರಡು ದಿನದ‌ ಹಿಂದೆ ಅವರ‌ ಅನಾರೋಗ್ಯದ ಬಗ್ಗೆ ನನಗೆ ಗೊತ್ತಾಗಿದೆ ಎಂದು ಹೇಳಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವರು ಶೀಘ್ರವಾಗಿ ಗುಣಮುಖರಾಗಲಿ. ಅವರು ನನಗೆ ಅತ್ಯಂತ ಆತ್ಮೀಯ ಸ್ನೇಹಿತ. ಸಾಮಾಜಿಕ ಜಾಲತಾಣದಲ್ಲಿ ಅವರ ಬಗ್ಗೆ ಯಾರೋ ತಪ್ಪು ‌ಮಾಹಿತಿ ಹಾಕುತಿದ್ದಾರೆ. ಈ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ. ಭಗವಂತನಲ್ಲಿ ಅವರು ಆರೋಗ್ಯ ಸುಧಾರಿಸಿ ಬರಲಿ ಎಂದು ಪ್ರಾರ್ಥನೆ ಮಾಡಬಹುದು ಅವರ ವದಂತಿ ಹಬ್ಬಿಸಬಾರದು ಎಂದರು.

Previous articleದಸರಾ ಜಂಬೂಸವಾರಿ ಪುಷ್ಪಾರ್ಚನೆಗೆ ಪ್ರಧಾನಿ ಬರುವುದಿಲ್ಲ ;S T ಸೋಮಶೇಖರ್
Next article2100 ಶಾಲಾ ಕೊಠಡಿ, 2500 ಅಂಗನವಾಡಿ ಕೇಂದ್ರ ಪ್ರಾರಂಭ