ಪೆಟ್ರೋಲ್, ಡೀಸೆಲ್ ೨ ರೂ. ಅಗ್ಗ

0
9

ನವದೆಹಲಿ: ಚುನಾವಣೆಯ ದಿನಾಂಕ ಘೋಷಣೆಗೂ ಮುನ್ನ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ ತಲಾ ೨ ರೂ. ಇಳಿಸಿದೆ. ಆದೇಶ ಹೊರಬಿದ್ದಿದ್ದು, ಶುಕ್ರವಾರ ಬೆಳಗ್ಗೆ ಆರರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ೯೯.೯೪ ರೂ. ( ಹಳೆಯ ದರ ೧೦೧.೯೪ ), ಡೀಸೆಲ್ ೮೫.೮೭ ( ಹಳೆಯ ದರ ೮೭.೮೯ ) ರೂ.ಗಳಾಗಿವೆ.
ನರೇಂದ್ರ ಮೋದಿ ಸರ್ಕಾರದ ಜನಪರ ಕಾಳಜಿಯನ್ನು ಈ ಬೆಲೆ ಇಳಿಕೆ ಪ್ರತಿಬಿಂಬಿಸಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆ ಸಚಿವ ಹರದೀಪ್‌ಸಿಂಗ್ ಪುರಿ ತಿಳಿಸಿದ್ದಾರೆ.
ಅಲ್ಲದೆ, ತಮ್ಮ ಕೋಟ್ಯಂತರ ಕುಟುಂಬಗಳ ಕಲ್ಯಾಣ ಮತ್ತು ಅನುಕೂಲಕ್ಕಾಗಿ ಪ್ರಧಾನಿ ಮೋದಿ ಕೈಗೊಂಡಿರುವ ಮಹತ್ವದ ನಿರ್ಧಾರ ಇದಾಗಿದೆ ಎಂದು ಸಚಿವರು ಹೇಳಿದ್ದಾರೆ.

Previous articleವಿಧಾನಸೌಧದ ಆವರಣದಲ್ಲಿ ಭುವನೇಶ್ವರಿ ಪ್ರತಿಮೆ ನಿರ್ಮಾಣ
Next article2029ಕ್ಕೆ ಏಕ ಚುನಾವಣೆ: ಸಲಹೆ