ಪಕ್ಷವನ್ನು ಕಟ್ಟಲು ಆಗದವರು ಸರಕಾರ ರಚಿಸುತ್ತಾರಾ: ಕಟೀಲ್

0
144
ಕಟೀಲ್

ರಾಜ್ಯದಲ್ಲಿ ಕಾಂಗ್ರೆಸ್ ಮುಖಂಡರು ಪಕ್ಷವನ್ನು ಸರಿಯಾಗಿ ರಚನೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು ಇವರು ರಾಜ್ಯದಲ್ಲಿ ಸರಕಾರ ರಚನೆ ಮಾಡಲು ಸಾಧ್ಯವೇ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನಕುಮಾರ ಕಟೀಲ್ ಪ್ರಶ್ನಿಸಿದ್ದಾರೆ.
ಬಾಗಲಕೋಟೆ ಜಿಲ್ಲೆ ಇಳಕಲ್‌ನಲ್ಲಿ ಕಾರ್ಯಕರ್ತರ ಮತ್ತು ಫಲಾನುಭವಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಸಹ ಕಾಂಗ್ರೆಸ್ ಪಕ್ಷ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮಾಡುವಲ್ಲಿ ಸೋತು ಹೋಗಿದೆ ರಾಹುಲ್ ಗಾಂಧಿ ಮಾಡುತ್ತಿರುವುದು ಭಾರತ ಜೋಡೋ ಅಲ್ಲ ಅದು ಕಾಂಗ್ರೆಸ್ ಜೋಡೋ ಆಗಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಮನೆಯೊಂದು ಮೂರು ಬಾಗಿಲು ಆಗಿದ್ದು ಡಿಕೆಶಿ, ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಗುಂಪುಗಳಾಗಿದ್ದು ಇವರು ಎಲ್ಲರೂ ಸೇರಿಕೊಂಡು ಚುನಾವಣೆ ಎದುರಿಸಲು ಆಗದ ಪರಿಸ್ಥಿತಿಯಲ್ಲಿ ಇದ್ದಾರೆ ಎಂದರು.

Previous articleಐಐಐಟಿ ಧಾರವಾಡ ಉದ್ಘಾಟನೆಗೆ ಆಗಮಿಸಿದ ರಾಷ್ಟ್ರಪತಿ
Next articleಮಂತ್ರಾಲಯದ ಶ್ರೀರಾಯರ ಮಠದಿಂದ ಬಡ ರೈತರಿಗೆ ಹೋರಿಗಳ ಉಚಿತ ವಿತರಣೆ