ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ: ಮುಂದುವರೆದ ಶೋಧ ಕಾರ್ಯ

0
44

ಹುಬ್ಬಳ್ಳಿ: ಕಳೆದ ರಾತ್ರಿ ಸುರಿದ ಮಳೆಗೆ ಮದ್ಯೆಯೇ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ವ್ಯಕ್ತಿಯೋರ್ವ ಮಾವನೂರ ಬ್ರಿಡ್ಜ್‌ ಹತ್ತಿರ ನೀರಿನಲ್ಲಿ ಕೊಚ್ಚಿ ಹೋಗಿದ್ದು ಆತನ ಪತ್ತೆ ಕಾರ್ಯ ಮುಂದುವರೆದಿದೆ.
ಹುಬ್ಬಳ್ಳಿಯ ಬೀರಬಂದ ಓಣಿಯ ಹುಸೇನಸಾಬ್ ಕಳಸ ನೀರಿನಲ್ಲಿ ಕೊಚ್ಚಿ ಹೋಗಿರುವ ವ್ಯಕ್ತಿ. ಕಳೆದ ರಾತ್ರಿಯಿಂದ ಪೋಲೀಸರು ಮತ್ತು ಮಹಾನಗರ ಪಾಲಿಕೆ ಅಧಿಕಾರಿ, ಸಿಬ್ಬಂದಿ, ಅಗ್ನಿಶಾಮಕ‌ದಳದವರು ಹುಡುಕಾಟದಲ್ಲಿದ್ದಾರೆ. ವ್ಯಕ್ತಿಗಾಗಿ ಹುಡುಕಾಟ ಮುಂದುವರೆದಿದೆ.

Previous articleರಾಜ್ಯದ 10 ಜಿಲ್ಲೆಗಳಿಗೆ ನೂತನ ಅಧ್ಯಕ್ಷರ ನೇಮಕ
Next articleಬಸ್ – ಆಟೋ ರಿಕ್ಷಾ ನಡುವೆ ಅಪಘಾತ‌: ಓರ್ವ ಸಾವು, ಹಲವರಿಗೆ ಗಾಯ