ತಾಜ್ ಮಹಲ್‌ ಸ್ಫೋಟಿಸುವುದಾಗಿ ಹುಸಿ ಬಾಂಬ್‌ ಬೆದರಿಕೆ

0
13

ಆಗ್ರಾ: ತಾಜ್‌ಮಹಲ್‌ ಸ್ಫೋಟಿಸುವುದಾಗಿ ಬೆದರಿಕೆಯ ಇಮೇಲ್ ಬಂದ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಉತ್ತರ ಪ್ರದೇಶ ಪ್ರವಾಸೋದ್ಯಮ ಪ್ರಾದೇಶಿಕ ಕಚೇರಿಗೆ ಬಾಂಬ್ ಬೆದರಿಕೆ ಬಂದಿದ್ದು, ನಂತರ ಅದು ಸುಳ್ಳು ಕರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಗ್ರಾದ ತಾಜ್ ಮಹಲ್‌ಗೆ ಮಂಗಳವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. “ಪ್ರವಾಸೋದ್ಯಮ ಇಲಾಖೆಗೆ ಇಮೇಲ್ ಬಂದಿದೆ. ಅದರ ಆಧಾರದ ಮೇಲೆ ತಾಜ್‌ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Previous articleವಿಕಲಚೇತನರು ಸಮಾಜಕ್ಕೆ ಆದರ್ಶಪ್ರಾಯರು
Next articleಫೆಂಗಲ್ ಮಳೆ ತಗ್ಗಿದರೂ ತಗ್ಗದ ಹಾನಿ: ಸಿಡಿಲಿಗೆ ಯುವಕ ಬಲಿ