ಡಿಸೇಲ್ ಟ್ಯಾಂಕರ್‌ಗೆ ಟ್ರಕ್ ಡಿಕ್ಕಿ: ಡಿಸೇಲ್ ತುಂಬಿಕೊಳ್ಳುತ್ತಿರುವ ಸ್ಥಳೀಯರು

0
40

ಹುಬ್ಬಳ್ಳಿ: ಡಿಸೇಲ್ ಟ್ಯಾಂಕ್‌ರಗೆ ಹಿಂಬದಿಯಿಂದ ಟ್ರಕ್ ಗುದ್ದಿ ಡಿಸೇಲ್ ಟ್ಯಾಂಕ್ ಕಟ್ಟ ಆಗಿ ಡಿಸೇಲ್ ಪೊಲು ಆಗಿತ್ತಿರುವ ಘಟನೆ ನಡೆದಿದೆ.
ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನವಲಗುಂದ ಕಡೆಯಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಡಿಸೇಲ್ ಟ್ಯಾಂಕರ್ ಗೆ ಹಿಂಬದಿಯಿಂದ ಟ್ರಕ್ ಗುದ್ದಿದ ಪರಿಣಾಮವಾಗಿ ಈ ಘಟನೆ ಸಂಭವಿಸಿದೆ. ಇನ್ನು ಘಟನೆಯಲ್ಲಿ ಟ್ರಕ್ ಡ್ರೈವರ್ ಟ್ರಕ್‌ನಲ್ಲಿ ಸಿಲುಕಿದ್ದು ಸ್ಥಳೀಯರ ಸಹಾಯದಿಂದ ಹೊರ ತೆಗೆಯುವ ಪ್ರಯತ್ನ ನಡೆದಿದೆ. ಈ ಮದ್ಯೆ ಡಿಸೇಲ್ ಟ್ಯಾಂಕ್ ಲೀಕ್ ಆಗಿರುವ ಪರಿಣಾಮ ಗ್ರಾಮದ ಕೆಲವರು ಡಿಸೇಲ್ ಬಾಟಲ್ ನಲ್ಲಿ ತುಂಬಿಕೊಂಡು ಹೋಗುತ್ತಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮೀಣ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Previous articleಹೆದ್ದಾರಿ ಯೋಜನಾಧಿಕಾರಿ ಮನೆ ಮೇಲೆ ಲೋಕಾ ದಾಳಿ
Next articleಮಂತ್ರಾಲಯದಲ್ಲಿ ಶ್ರೀಗುರುರಾಯರ ವರ್ಧಂತಿ ಉತ್ಸವ