ಡಿಸೆಂಬರೊಳಗೆ ಡಿಸಿಎಂ – ಸಿಎಂ ಆಗುತ್ತಾರೆ: ರಕ್ತದಲ್ಲಿ ಬೇಕಾದ್ರೆ ಬರೆದು ಕೊಡ್ತೀನಿ

0
32

ಏಳೂವರೆ ವರ್ಷ ಅವರೇ ಸಿಎಂ ಆಗಿರುತ್ತಾರೆ

ದಾವಣಗೆರೆ: ರಕ್ತದಲ್ಲಿ ಬೇಕಾದರೆ ಈಗಲೇ ಬರೆದು ಕೊಡ್ತೀನಿ ಡಿಸೆಂಬರ್ ಒಳಗಾಗಿ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೆ ಎಂದು ರಾಜ್ಯದಲ್ಲಿ ಪವರ್ ಶೇರಿಂಗ್ ಚರ್ಚೆ ಜೋರಾಗಿರೋ ಬೆನ್ನಲ್ಲೆ ಶಾಸಕ ಶಿವಗಂಗಾ ಬಸವರಾಜ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕಾಗಿ ಡಿಕೆ ಶಿವಕುಮಾರ್ ಸಾಕಷ್ಟು ದುಡಿದಿದ್ದಾರೆ. 80 ಶಾಸಕರು ಗೆಲ್ಲಲು ಡಿ.ಕೆ ಶಿವಕುಮಾರ್ ಅವರ ಪಾತ್ರ ಹಿರಿದಾಗಿದ್ದು, ಡಿಸೆಂಬರ್ ಒಳಗೆ ಡಿಕೆಶಿ ಮುಖ್ಯಮಂತ್ರಿ ಆಗೆ ಆಗ್ತಾರೆ. ಮುಂದಿನ 5 ವರ್ಷ ಅವರೆ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಹೇಳಿದರು.

ಡಿಕೆಶಿ ಅವರು ಏನೇ ನಿರ್ಧಾರ ತೆಗೆದುಕೊಂಡರು ನಾವು ಅದಕ್ಕೆ ಬದ್ಧರಾಗಿರುತ್ತೇವೆ. ಅವರು ಏನೇ ಮಾಡಿದರೂ ಪಕ್ಷಕ್ಕಾಗಿಯೇ ಮಾಡುತ್ತಾರೆ ಎಂಬ ನಂಬಿಕೆ ನಮಗಿದೆ. ಅವರು ಸಿಎಂ ಆಗುವುದು ಖಚಿತ ಎಂದರು.

ಕೆ ಎನ್ ರಾಜಣ್ಣ ಹೇಳಿಕೆಯಿಂದ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಭಾರೀ ಮುಜುಗರ ಆಗಿದೆ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ, ಹೈಕಮಾಂಡ್ ಇದನ್ನ ಗಮನಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Previous articleವಿಜೃಂಭಣೆಯಿಂದ ಜರುಗಿದ ಹೊರನಾಡಿನ ಅನ್ನಪೂರ್ಣೇಶ್ವರಿ ರಥೋತ್ಸವ
Next articleರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುತ್ತಿರುವ ಸರ್ಕಾರದ ವಿರುದ್ಧ ಪ್ರತಿಭಟನೆ