Home ಅಪರಾಧ ಜೂಜು ಅಡ್ಡೆಗಳ ಮೇಲೆ ದಾಳಿ: ೧೬.೬೪ ಲಕ್ಷ ಜಪ್ತಿ

ಜೂಜು ಅಡ್ಡೆಗಳ ಮೇಲೆ ದಾಳಿ: ೧೬.೬೪ ಲಕ್ಷ ಜಪ್ತಿ

0
103

ಬಳ್ಳಾರಿ: ಕಳೆದ ನಾಲ್ಕು ದಿನಗಳಲ್ಲಿ ನಾನಾ ಕಡೆ ನಡೆಸುತ್ತಿದ್ದ ಜೂಜು ಅಡ್ಡೆಗಳ ಮೇಲೆ‌ ದಾಳಿ‌ ಮಾಡಿದ ಬಳ್ಳಾರಿ ಪೊಲೀಸರು ೧೬,೬೪,೧೩೫ ರೂ.ಗಳನ್ನು ಜಪ್ತಿ ಮಾಡಿದ್ದಾರೆ.
ಅ.೩೦ ರಿಂದ ನ.೩ ರವರೆಗೆ ಒಟ್ಟು ೧೦೦ ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ಮಾಡಲಾಗಿದ್ದು, ೧೩೦ ಕೇಸ್‌ಗಳನ್ನು ದಾಖಲು ಮಾಡಲಾಗಿದೆ. ೮೧೦ ಜನರನ್ನು ಬಂಧಿಸಲಾಗಿದ್ದು, 16,64,135 ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಶೋಭರಾಣಿ‌ ತಿಳಿಸಿದ್ದಾರೆ.