ಜನ ನಮ್ಮ ಜತೆ ಇದ್ರೆ ಯಾರೂ ಏನೂ ಮಾಡೋಕಾಗಲ್ಲ

0
14

ಹಾವೇರಿ: ಜನರು ನಮ್ಮ ಜೊತೆಗೆ ಇದ್ರೆ ಯಾರೂ ಏನೂ ಮಾಡೋಕೆ ಆಗಲ್ಲ ಅನ್ನೋದಕ್ಕೆ ಬೆಳಗಾವಿ ಗ್ರಾಮೀಣ ಚುನಾವಣೆ ಸಾಕ್ಷಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಸಾಂವಸಗಿ ಗ್ರಾಮದ ವೀರರಾಣಿ ಚೆನ್ನಮ್ಮ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಸೋಲಿಸಬೇಕು ಎಂದು ಎನೆನೋ ಪ್ರಯತ್ನ ಮಾಡಿದ್ರು. ಎನೆನೋ ಮಾತಾಡಿದ್ರು. 5 ಸಾವಿರ ರೂಪಾಯಿ ಕೊಟ್ಟು ಮತ ಪಡೆತೀನಿ ಅಂತಾ ಹೇಳಿದ್ರು. ಆದರೆ, ಜನ ತಕ್ಕ ಉತ್ತರ ಕೊಟ್ಟು ನನ್ನ ಗೆಲ್ಲಿಸಿದ್ರು‌ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ಅವರಿಗೆ ಟಾಂಗ್‌ ಕೊಟ್ಟರು.

Previous articleಜಾತಿಗಣತಿ ವರದಿ ಸ್ವೀಕಾರಕ್ಕೆ ಬದ್ಧ
Next articleಪುನೀತ್‌ ೨ನೇ ಪುಣ್ಯಸ್ಮರಣೆ