ಗ್ಯಾರೆಂಟಿ ಇಲ್ಲದ ಕುರ್ಚಿಯಿಂದ ಪೊಳ್ಳು ಆಯವ್ಯಯ

0
103

ಬಜೆಟ್‌ನಿಂದ ಕನ್ನಡಿಗರಿಗೆ ಏನೂ ನಿರೀಕ್ಷೆಗಳಿಲ್ಲ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಕುರಿತಂತೆ ಪ್ರತಿಪಕ್ಷ ನಾಯಕ ಆರ್.ಅಶೋಕ್‌ ವ್ಯಂಗ್ಯವಾಡಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಸತ್ಯವಿಲ್ಲದ ಭಕ್ತಿಯ ಸಾವಿರ ವರುಷ ಮಾಡಿದರೇನು? ನಿಷ್ಠೆಯಿಲ್ಲದ ಪೂಜೆಯನೇಸುಕಾಲ ಮಾಡಿದರೇನು? ಎಂಬ ವಚನಾಮೃತದಂತೆ… ಹುರುಳಿಲ್ಲದ ಬಜೆಟ್ ಹದಿನಾರು ಮಂಡಿಸಿದರೇನು? ಗ್ಯಾರೆಂಟಿ ಇಲ್ಲದ ಕುರ್ಚಿಯಿಂದ ಪೊಳ್ಳು ಆಯವ್ಯಯ ಭಾಷಣ ಓದಿದರೇನು? ಸಿಎಂ ಸಿದ್ದರಾಮಯ್ಯ ಅವರು ಮಂಡಿಸಲಿರುವ 16ನೇ ಬಜೆಟ್‌ನಿಂದ ಕನ್ನಡಿಗರಿಗೆ ಏನೂ ನಿರೀಕ್ಷೆಗಳಿಲ್ಲ. ಅಸಲಿಗೆ ಸಿದ್ದರಾಮಯ್ಯನವರು ಮಂಡಿಸಲಿರುವ ಈ ಸಾಲಿನ ಬಜೆಟ್ ಅನ್ನು ಅನುಷ್ಠಾನ ಮಾಡಲು ಅವರು ಮುಖ್ಯಮಂತ್ರಿಗಳಾಗಿ ಮುಂದುವರೆಯುತ್ತಾರೋ ಇಲ್ಲವೋ ಎನ್ನುವುದನ್ನ ಮೊದಲು ಕರ್ನಾಟಕದ ಜನತೆಗೆ ಸ್ಪಷ್ಟಪಡಿಸಬೇಕು ಎಂದಿದ್ದಾರೆ

Previous articleChampions Trophy: ಗೆಲುವಿನ ಚಕ್ರವರ್ತಿಯಾದ ಭಾರತ
Next articleಇನ್ನೋವಾ ಕಾರಿಗೆ ಬೈಕ್‌ ಡಿಕ್ಕಿ: ನಾಲ್ವರು ಸ್ಥಳದಲ್ಲೇ ಸಾವು